ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 8 MARCH 2024
SHIMOGA : ನಕಲಿ ಚಿನ್ನಾಭರಣ ಅಡವಿಟ್ಟು ದುರ್ಗಿಗುಡಿಯಲ್ಲಿರುವ ಬ್ಯಾಂಕ್ ಒಂದರ ಶಾಖೆಯಿಂದ ಲಕ್ಷಾಂತರ ರೂ. ಸಾಲ ಪಡೆದು ವಂಚಿಸಲಾಗಿದೆ. ಈ ಸಂಬಂಧ ಬ್ಯಾಂಕಿನ ಚಿನ್ನದ ಮೌಲ್ಯಮಾಪಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅರ್ಧ ಕೆ.ಜಿ. ನಕಲಿ ಚಿನ್ನ
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಾಲ್ಕು ಬಾರಿ ವ್ಯಕ್ತಿಯೊಬ್ಬ 476 ಗ್ರಾಂ ಚಿನ್ನ ಲೇಪಿತ ನಕಲಿ ಬಂಗಾರ ಅಡವಿಟ್ಟಿದ್ದ. 19.41 ಲಕ್ಷ ರೂ. ಸಾಲ ಪಡೆದಿದ್ದ. ಮತ್ತೊಬ್ಬ ವ್ಯಕ್ತಿ ಅಕ್ಟೋಬರ್ ತಿಂಗಳಲ್ಲಿ 151 ಗ್ರಾಂ ನಕಲಿ ಬಂಗಾರವನ್ನು ಅಡಿವಿಟ್ಟು 6.12 ಲಕ್ಷ ರೂ. ಸಾಲ ಪಡೆದಿದ್ದ.
ಸಿಕ್ಕಿಬಿದ್ದಿದ್ದು ಹೇಗೆ?
ಬ್ಯಾಂಕಿನ ಲೆಕ್ಕ ಪರಿಶೋಧನೆ ವೇಳೆ ನಕಲಿ ಬಂಗಾರವನ್ನು ಅಡವಿಟ್ಟಿರುವುದು ಬೆಳಕಿಗೆ ಬಂದಿದೆ. ಬ್ಯಾಂಕಿನಲ್ಲಿ ಚಿನ್ನಾಭರಣ ಪರಿಶೀಲನೆ ನಡೆಸುವ ವ್ಯಕ್ತಿ ಇತರೆ ಇಬ್ಬರೊಂದಿಗೆ ಸೇರಿಕೊಂಡು ನಕಲಿ ಬಂಗಾರವನ್ನು ಇರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಬ್ಯಾಂಕ್‌ನ ಮ್ಯಾನೇಜರ್ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರದ ಮಾರ್ಗ ಬದಲಾವಣೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422