ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 11 ಮಾರ್ಚ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮತ್ತೊಬ್ಬ ರೌಡಿ ಶೀಟರ್ ಕಾಲಿಗೆ ಶಿವಮೊಗ್ಗ ಪೊಲೀಸರು ಗುಂಡಿಕ್ಕಿದ್ದಾರೆ. ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್ಸ್’ಪೆಕ್ಟರ್ ಒಬ್ಬರು ಹಾರಿಸಿದ ಗುಂಡು, ರೌಡಿ ಶೀಟರ್ ಕಾಲಿಗೆ ಹೊಕ್ಕಿದೆ.
ಯಾರದು ರೌಡಿ ಶೀಟರ್? ಈಗ ಹೇಗಿದೆ ಪರಿಸ್ಥಿತಿ?
ರೌಡಿ ಶೀಟರ್ ಸೈನಾದಿ ಲಕ್ಷಣ್ ಎಡಗಾಲಿಗೆ ಗುಂಡು ಹಾರಿಸಲಾಗಿದೆ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೇಗಾಯ್ತು ಘಟನೆ?
ರೌಡಿ ಶೀಟರ್ ಸೈನಾದಿ ಲಕ್ಷಣ್ ವಿರುದ್ಧ ಹಲವು ಪ್ರಕರಣಗಳಿದ್ದವು. ಈತ ಬೆಂಗಳೂರಿನಲ್ಲಿರುವ ಮಾಹಿತಿ ತಿಳಿಯುತ್ತಿದ್ದಂತೆ ರೌಡಿ ನಿಗ್ರಹ ಪಡೆ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದರು. ಶಿವಮೊಗ್ಗಕ್ಕೆ ಕರೆ ತರುವಾಗ ಮಲವಗೊಪ್ಪ ಬಳಿ ಮೂತ್ರ ವಿಸರ್ಜನೆ ಮಾಡುವ ನೆಪ ಹೇಳಿದ್ದಾನೆ. ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಸೈನಾದಿ ಲಕ್ಷ್ಮಣ್, ಕೈಗೆ ಹಾಕಲಾಗಿದ್ದ ಚೈನ್’ನಿಂದ ರೌಡಿ ನಿಗ್ರಹ ಪಡೆ ಮುಖ್ಯ ಪೇದೆ ಹರ್ಷ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಎಸ್ಕೇಪ್ ಆಗಲು ಯತ್ನಿಸಿದ್ದಾನೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ವಾರ್ನಿಂಗ್ ಫೈರ್ ಮಾಡಿದ ಪೊಲೀಸ್
ಸೈನಾದಿ ಲಕ್ಷ್ಮಣ್ ಎಸ್ಕೇಪ್ ಆಗಲು ಯತ್ನಿಸಿದಾಗ ರೌಡಿ ನಿಗ್ರಹ ಪಡೆ ಇನ್ಸ್’ಪೆಕ್ಟರ್ ಗುರುರಾಜ್ ಅವರು ವಾರ್ನಿಂಗ್ ನೀಡಿದ್ದಾರೆ. ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಇದಕ್ಕೂ ಕ್ಯಾರೆ ಅನ್ನದೆ ಸೈನಾದಿ ಲಕ್ಷ್ಮಣ್ ಓಡುತ್ತಿದ್ದಾಗ, ಕಾಲಿಗೆ ಗುಂಡು ಹಾರಿಸಿದ್ದಾರೆ.
ಯಾರವನು ಸೈನಾದಿ ಲಕ್ಷಣ್?
ರೌಡಿ ಶೀಟರ್ ಸೈನಾದಿ ಲಕ್ಷ್ಮಣ್ ರೌಡಿ ಶೀಟರ್ ಮಾರ್ಕೆಟ್ ಲೋಕಿಯ ಸಹಚರ. ಈತನ ವಿರುದ್ಧ ಹಲವು ಪ್ರಕರಣಗಳಿವೆ. 2006ರಲ್ಲಿ ಲವ ಕುಶ ಡಬಲ್ ಮರ್ಡರ್ ಕೇಸ್, 2015ರಲ್ಲಿ ರೌಡಿ ಶೀಟರ್ ಮೋಟಿ ವೆಂಕಟೇಶ್ ಹತ್ಯೆ ಪ್ರಕರಣ, 2017ರಲ್ಲಿ ಕೋಕ ಕೇಸ್, 2018ರಲ್ಲಿ ಮಾರ್ಕೆಟ್ ಗಿರಿ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ. ಮಾರ್ಕೆಟ್ ಗಿರಿ ಹತ್ಯೆಯ ಬಳಿಕ ಸೈನಾದಿ ಲಕ್ಷ್ಮಣ್ ತಲೆ ಮರೆಸಿಕೊಂಡಿದ್ದ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಸ್ಪಷ್ಟಪಡಿಸಿದ್ದಾರೆ.
ಗಾಯಗೊಂಡಿದ್ದ ಮುಖ್ಯ ಪೇದೆಗೆ ಚಿಕಿತ್ಸೆ
ಸೈನಾದಿ ಲಕ್ಷ್ಮಣ್ ಎಸ್ಕೇಪ್ ಆಗುವ ಹಂತದಲ್ಲಿ ಮುಖ್ಯ ಪೇದೆ ಹರ್ಷ ಮೇಲೆ ಹಲ್ಲೆ ನಡೆಸಿದ್ದ. ಹರ್ಷ ಅವರ ತಲೆಗೆ ಗಾಯವಾಗಿದ್ದು, ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೂ ಚಿಕಿತ್ಸೆ ನಡೆಯುತ್ತಿದೆ.
ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್, ಡಿವೈಎಸ್’ಪಿ ಉಮೇಶ್ ನಾಯ್ಕ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]