ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 4 AUGUST 2024 : ನಿಗದಿಗಿಂತಲು ವೇಗವಾಗಿ (Speed) ವಾಹನ ಚಲಾಯಿಸುವವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ವಾಹನ ಸವಾರನೊಬ್ಬನ ವಿರುದ್ಧ ಮೊದಲ ಎಫ್‌ಐಆರ್ ದಾಖಲಾಗಿದೆ.
83 ಕಿ.ಮೀ ಸ್ಪೀಡ್‌ನಲ್ಲಿ ಬಂದ ಬೈಕ್
ಶಿವಮೊಗ್ಗ – ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಡಿಕೊಪ್ಪದ ಸೇತುವೆ ಸಮೀಪ ಬೈಕ್ ಒಂದು 83 ಕಿ.ಮೀ ವೇಗದಲ್ಲಿ ಸಂಚರಿಸಿದೆ. ಅಲ್ಲದೆ ಬೈಕ್‌ನಲ್ಲಿ ಸವಾರ ಸೇರಿ ಮೂರು ಸಂಚರಿಸುತ್ತಿದ್ದರು. ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಸಮೀಪ ಇರುವ ಸ್ಮಾರ್ಟ್ ಸಿಟಿ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು.
ಈ ರಸ್ತೆಯಲ್ಲಿ ವೇಗ ಮಿತಿ ಎಷ್ಟು?
ಗಾಡಿಕೊಪ್ಪ ಸೇತುವೆಯಿಂದ ಹೆಲಿಪ್ಯಾಡ್ ವೃತ್ತ – ಬಸ್ ಸ್ಟಾಂಡ್ – ಅಮೀರ್ ಅಹಮದ್ ಸರ್ಕಲ್‌ವರೆಗೆ ದ್ವಿಚಕ್ರ ವಾಹನಗಳಿಗೆ 30 ಕಿ.ಮೀ ವೇಗಮಿತಿ ಇದೆ. ಇತರೆ ವಾಹನಗಳಿಗೆ 40 ಕಿ.ಮೀ ವೇಗಮಿತಿ ಇದೆ. ಈ ನಿಯಮ ಉಲ್ಲಂಘಿಸಿದ್ದಕ್ಕೆ ದ್ವಿಚಕ್ರ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಾಗಿದೆ. ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಪ್ರವೀಣ್ ಪಾಟೀಲ್ ತ್ರಿಬಲ್ ರೈಡಿಂಗ್, ವೇಗ ಮಿತಿ ಉಲ್ಲಂಘನೆಯನ್ನು ಸಿಸಿಟಿವಿ ಪರಿಶೀಲಿಸಿ ಪತ್ತೆ ಹಚ್ಚಿದ್ದರು.
ಇದನ್ನೂ ಓದಿ ⇓
SHIMOGA JOBS : ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹಲವು ಕೆಲಸ ಖಾಲಿ ಇದೆ, ಅನುಭವ ಇಲ್ಲದವರಿಗು ಅವಕಾಶ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422