ಕಾರಲ್ಲಿ ಬಂದು ಬಾಲಕನ ಕಿಡ್ನಾಪ್, ಅಡಕೆ ವ್ಯಾಪಾರಿ ಸೇರಿ ಭದ್ರಾವತಿ, ಶಿವಮೊಗ್ಗ, ಸಾಗರದ ಐವರು ಅರೆಸ್ಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 25 DECEMBER 2022

ಭದ್ರಾವತಿ : ಬಾಲಕನ ಅಪಹರಣ (kidnap case) ಮಾಡಿ ಪೋಷಕರಿಗೆ ಹಣದ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಒಂದನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Shimoga Nanjappa Hospital

ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಮಹಮದ್ ಅಜರ್ ಎಂಬುವವರ 16 ವರ್ಷದ ಮಗನ ಕಿಡ್ನಾಪ್ (kidnap case) ಮಾಡಲಾಗಿತ್ತು. ಡಿ.22ರಂದು ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಾಲಕನ ಅಪಹರಣ ಮಾಡಿದ್ದರು. ಅಲ್ಲದೆ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಈ ಸಂಬಂಧ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ರಾಶಿ ರಾಶಿ ಸೈಲೆನ್ಸರ್ ಗಳನ್ನು ರಸ್ತೆ ಮೇಲಿಟ್ಟು ಬುಲ್ಡೋಜರ್ ಹತ್ತಿಸಿದ ಪೊಲೀಸರು

ತನಿಖೆ ಕೈಗೊಂಡ ನ್ಯೂಟೌನ್ ಠಾಣೆ ಪೊಲೀಸರು ಬಾಲಕನ ಪತ್ತೆ ಮಾಡಿದ್ದಾರೆ. ಅಪಹರಣಕಾರರನ್ನು ಬಂಧಿಸಿದ್ದಾರೆ. ಭದ್ರಾವತಿ ನೆಹರು ನಗರದ ಮುಬಾರಕ್ ಅಲಿಯಾಸ್ ಡಿಚ್ಚಿ (24), ಸಾಗರದ ಜಾಬೀರ್ ಬಾಷಾ ಅಲಿಯಾಸ್ ರಾಬರ್ಟ್ (22), ಶಿವಮೊಗ್ಗ ಟಿಪ್ಪುನಗರದ ಮುಸ್ತಫಾ (26), ಸಾಗರ ನೂರುಲ್ ಹುದಾ ಮಸೀದಿ ಸಮೀಪದ ಅಡಕೆ ವ್ಯಾಪಾರಿ ಅಬ್ದುಲ್ ಸಲಾಂ (26), ಸಾಗರ ಅಣಲೆಕೊಪ್ಪದ ಇರ್ಫಾನ್ (31) ಬಂಧಿತರು. ಇವರಿಂದ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.

ಭದ್ರಾವತಿ ಎ.ಎಸ್.ಪಿ ಜಿತೇಂದ್ರ ದಯಾಮ, ಸಿಪಿಐ ರಾಘವೇಂದ್ರ ಕಾಂಡಿಕೆ ಅವರ ನೇತೃತ್ವದಲ್ಲಿ, ನ್ಯೂಟೌನ್ ಪೊಲೀಸ್ ಠಾಣೆ ಪಿಎಸ್‌ಐ ರಂಗನಾಥ ಅಂತರಗಟ್ಟಿ, ಸಿಬ್ಬಂದಿ ಎ.ಎಸ್.ಐ ವೇಂಕಟೇಶ, ರಾಘವೇಂದ್ರ, ಶ್ಯಾಮಕುಮಾರ,  ಶ್ರೀಧರ, ರೂಪೇಶ, ಹಾಲಪ್ಪ, ಮೌನೇಶ, ಪೈರೋಜ್, ಸುನೀಲ್ ಕುಮಾರ, ತೀರ್ಥಲಿಂಗಪ್ಪ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

Shimoga nanjappa hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 25, 2022

Leave a Comment