ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 20 NOVEMBER 2024 : ಎಟಿಎಂ ಕೇಂದ್ರದ ಒಳಗೆ ಮಹಿಳೆಯೊಬ್ಬರಿಗೆ ಬದಲಿ ಎಟಿಎಂ ಕಾರ್ಡ್ ನೀಡಿ 44 ಸಾವಿರ ರೂ. ಹಣ ಡ್ರಾ ಮಾಡಿಕೊಂಡು ವಂಚಿಸಲಾಗಿದೆ. ಶಿವಮೊಗ್ಗದ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ATM ಕೇಂದ್ರದಲ್ಲಿ ಘಟನೆ ನಡೆದಿದೆ.
ಎಟಿಎಂ ಕಾರ್ಡ್ ಬದಲಿಸಿದ್ದು ಹೇಗೆ?
ಸ್ವಸಹಾಯ ಸಂಘಕ್ಕೆ ಪಾವತಿಸಲು ಎಟಿಎಂನಿಂದ ಹಣ ಬಿಡಿಸಲು ಮಹಿಳೆ ತೆರಳಿದ್ದರು. ಎಟಿಎಂ ಮೆಷಿನ್‌ಗೆ ಹಾಕಿದ್ದ ಎಟಿಎಂ ಕಾರ್ಡ್ ಕಾರ್ಯನಿರ್ವಹಿಸಲಿಲ್ಲ. ಆಗ ಎಟಿಎಂ ಕೇಂದ್ರದ ಒಳಗೇ ಇದ್ದ ಇಬ್ಬರು ಅಪರಿಚಿತರು ಮಹಿಳೆಗೆ ಸಹಾಯ ಮಾಡಲು ಮುಂದಾದರು. ಅವರು ಪ್ರಯತ್ನಿಸಿದಾಗಲೂ ಎಟಿಎಂ ಕಾರ್ಡ್ ಕಾರ್ಯನಿರ್ವಹಿಸದ ಹಿನ್ನೆಲೆ ಮಹಿಳೆ ಹಿಂತಿರುಗಿದ್ದರು. ತಮ್ಮ ಪತಿಯನ್ನು ಕರೆಯಿಸಿಕೊಂಡು ಅವರ ಎಟಿಎಂ ಕಾರ್ಡ್‌ನಿಂದ ಹಣ ಬಿಡಿಸಿಕೊಂಡಿದ್ದರು.
ಬದಲಾಗಿತ್ತು ಎಟಿಎಂ ಕಾರ್ಡ್, ಹಣ ಮಿಸ್ಸಿಂಗ್
ಮಹಿಳೆಯ ಪತಿ ಮನೆಗೆ ತೆರಳಿ ಪರಿಶೀಲಿಸಿದಾಗ ಕೆನರಾ ಬ್ಯಾಂಕ್ ಎಟಿಎಂ ಕಾರ್ಡ್‌ನಿಂದ 44 ಸಾವಿರ ರೂ. ಹಣ ವಿತ್ ಡ್ರಾ ಆಗಿರುವುದು ಅರಿವಿಗೆ ಬಂದಿದೆ. ಕಾರ್ಡ್ ಪರಿಶೀಲಿಸಿದಾಗ ಅದಲು ಬದಲಾಗಿರುವುದು ಗೊತ್ತಾಗಿದೆ.
ಇದನ್ನೂ ಓದಿ » ತುಂಗಾ ನದಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಶವವಾಗಿ ಪತ್ತೆ
ಎಟಿಎಂ ಕೇಂದ್ರದ ಒಳಗೆ ಇಬ್ಬರು ಅಪರಿಚಿತರು ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಿಸಿದ್ದಾರೆ. ಅಲ್ಲದೆ ಅದನ್ನು ಬಳಸಿಕೊಂಡು ಹಣ ವಿತ್ ಡ್ರಾ ಮಾಡಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆ ಕೋಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422