ಶಿವಮೊಗ್ಗ : ನಡುರಾತ್ರಿ ದನಗಳ್ಳತನಕ್ಕೆ ಯತ್ನಿಸುತ್ತಿದ್ದ ಗ್ಯಾಂಗ್ (Gang) ಒಂದು ಸ್ಥಳೀಯರು ಬರುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಿದೆ. ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶಿವಮೊಗ್ಗದ ತಾಲೂಕು ಗಾಜನೂರಿನ ಬಸವೇಶ್ವರ ಬೀದಿಯಲ್ಲಿ ನಡೆದಿದೆ. ಮಾ.20ರಂದು ರಾತ್ರಿ 3 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ.
ನಡುರಾತ್ರಿ ಶಬ್ದ, ಹೊರಗೆ ನಿಂತಿತ್ತು ಕಾರು
ಬಸವೇಶ್ವರ ಬೀದಿಯಲ್ಲಿ ನಡುರಾತ್ರಿ ಶಬ್ದವಾಗುತ್ತಿತ್ತು. ನಾಯಿಗಳು ಜೋರಾಗಿ ಬೊಗಳುತ್ತಿದ್ದವು. ಅಕ್ಕಪಕ್ಕದ ಮನೆಯವರು ಎಚ್ಚರಗೊಂಡಿದ್ದಾರೆ. ಹೊರ ಬಂದಾಗ ರಸ್ತೆ ಬದಿ ನಿಂತಿದ್ದ ಹಸುವೊಂದನ್ನು ಸ್ಯಾಂಟ್ರೋ ಕಾರಿಗೆ ತುಂಬಿಕೊಳ್ಳುವ ಪ್ರಯತ್ನ ನಡೆಯುತ್ತಿತ್ತು ಎಂದು ಆರೋಪಿಸಲಾಗಿದೆ. ಕೆಳಗಿದೆ ವಿಡಿಯೋ.
ಮೊಬೈಲ್‌ನಲ್ಲಿ ಕಳ್ಳತನ ಯತ್ನ ಸೆರೆ
ಪ್ರೀತಂ ಎಂಬುವವರು ತಮ್ಮ ಮನೆ ಮೇಲಿನಿಂದ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ಹಸುವೊಂದನ್ನು ಕಾರಿನೊಳಗೆ ಎಳೆದೊಯ್ಯಲು ಪ್ರಯತ್ನಿಸುತ್ತಿದ್ದ. ಕೂಡಲೆ ಪ್ರೀತಂ ರಸ್ತೆಗೆ ಬಂದಿದ್ದು, ‘ಯಾರು ಅದುʼ ಎಂದು ಜೋರಾಗಿ ಕೂಗಿದ್ದಾರೆ. ಆಗ ಕಳ್ಳರು (Gang) ಹಸುವನ್ನು ಬಿಟ್ಟು ಕಾರು ಏರಿ ಪಾರಾರಿಯಾಗಿದ್ದಾರೆ. ಇಲ್ಲಿದೆ ವಿಡಿಯೋ.
ಕಾರಿನಲ್ಲಿ ಮೂರ್ನಾಲ್ಕು ಜನರಿದ್ದರು ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ನಗರ ಪೊಲೀಸರ ಕಾರ್ಯಾಚರಣೆ, ಬೈಕು, ಚಿನ್ನದ ಸಹಿತ ಸಿಕ್ಕಿಬಿದ್ದ ಆರೋಪಿ, ಏನಿದು ಕೇಸ್?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200