ಶಿವಮೊಗ್ಗ ಲೈವ್.ಕಾಂ |SHIMOGA NEWS | 6 DECEMBER 2020
ಆಸ್ಪತ್ರೆಗೆ ಬಂದಿದ್ದ ಬಾಲಕಿಗೆ ಊಟ ಕೊಡಿಸುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದು ಮೆಗ್ಗಾನ್ ಆಸ್ಪತ್ರೆ ವಾರ್ಡ್ ಬಾಯ್ ಮತ್ತು ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತಾಯಿ ನೋಡಿಕೊಳ್ಳಲು ಬಂದಿದ್ದಳು
ಆರೋಗ್ಯ ಸಮಸ್ಯೆ ಹಿನ್ನೆಲೆ ಬಾಲಕಿ ತಾಯಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೈಕೆ ಮಾಡಲು ಬಾಲಕಿ ಕೆಲ ದಿನದಿಂದ ಆಸ್ಪತ್ರೆಯಲ್ಲಿದ್ದಳು. ತಾಯಿಯನ್ನು ವಾರ್ಡ್‍ಗೆ ಕರೆದೊಯ್ಯುವುದು, ಚಿಕಿತ್ಸೆಗೆ ಕರೆದೊಯ್ಯುವಾಗ ವಾರ್ಡ್ ಬಾಯ್ ಮನೋಜ್ ಎಂಬಾತನ ಪರಿಚಯವಾಗಿದೆ. ವೀಲ್ ಚೇರ್ ತಂದು ಬಾಲಕಿಯ ತಾಯಿಯನ್ನು ಈತ ಕರೆದೊಯ್ಯುತ್ತಿದ್ದ. ಆಗಾಗ ಊಟ, ತಿಂಡಿ ತಂದು ಕೊಡುತ್ತಿದ್ದ ಎಂದು ಹೇಳಲಾಗುತ್ತಿದೆ.
READ ALSO | ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಬಂತು ನಿರ್ಭಯ ಬೈಕ್, ಏನಿದು ನಿರ್ಭಯ ಬೈಕ್? ಹೇಗಿರುತ್ತೆ ಕಾರ್ಯಾಚರಣೆ?
ನಿಷೇಧಾಜ್ಞೆ ಸಂದರ್ಭದಲ್ಲಿ ದುಷ್ಕೃತ್ಯ
ಗಲಭೆ ಹಿನ್ನೆಲೆ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಹೊಟೇಲ್‍ಗಳೆಲ್ಲ ಬಂದ್ ಆಗಿವೆ. ಬಾಲಕಿಗೆ ಎಲ್ಲಿಯೂ ಊಟ ಸಿಕ್ಕಿರಲಿಲ್ಲ. ವಾರ್ಡ್ ಬಾಯ್ ಮನೋಜ್ ಊಟ ಕೊಡಿಸುವುದಾಗಿ ನಂಬಿಸಿ ಕಾರಿನಲ್ಲಿ ಕರೆದೊಯ್ದಿದ್ದಾನೆ. ಈ ವೇಳೆ ಕಾರಿನಲ್ಲಿ ಮನೋಜ್ ಜೊತೆಗೆ ಆತನ ಮೂವರು ಸ್ನೇಹಿತರು ಇದ್ದರು. ಬಾಲಕಿಯನ್ನು ಸಾಗರ ರಸ್ತೆಯಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಅತ್ಯಾಚಾರದ ವಿಚಾರವನ್ನು ಬಾಲಕಿ ತಾಯಿಗೆ ತಿಳಿಸಿದ್ದು, ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
READ ALSO | ಚಿಕಿತ್ಸೆ ನೆಪದಲ್ಲಿ ಭದ್ರಾವತಿಯಲ್ಲಿ ಯುವತಿಗೆ ವೈದ್ಯನಿಂದ ಲೈಂಗಿಕ ಕಿರುಕುಳ, ಅರೆಸ್ಟ್
ಆರೋಪಿಗಳಿಗೆ ಬಲೆ ಬೀಸಿದ ಪೊಲೀಸ್
ಅಪ್ರಾಪ್ತೆ ಮೇಲೆ ಸಮೂಹಿಕ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]