ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ನವೆಂಬರ್ 2021
ಶಿವಮೊಗ್ಗದಲ್ಲಿರುವ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಮನೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈಗಾಗಲೆ ಮನೆಯಲ್ಲಿ ರಾಶಿ ರಾಶಿ ಚಿನ್ನ, ಕಂತೆ ಕಂತೆ ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಚಾಲುಕ್ಯ ನಗರ ಮತ್ತು ಗೋಪಾಳದಲ್ಲಿ ರುದ್ರೇಶಪ್ಪಗೆ ಸೇರಿದ ಮನೆಗಳಿವೆ. ಬೆಳಗ್ಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಮನೆಯ ಮೂಲೆ ಮೂಲೆಯನ್ನು ಶೋಧಿಸಿದ್ದಾರೆ.
ರಾಶಿ ರಾಶಿ ಚಿನ್ನ ಪತ್ತೆ
ಚಾಲುಕ್ಯ ನಗರದ ಮನೆಯಲ್ಲಿ ರಾಶಿ ರಾಶಿ ಚಿನ್ನಾಭರಣ ಪತ್ತೆಯಾಗಿದೆ. ನೆಕ್ಲೇಸ್’ಗಳು, ಉಂಗುರಗಳು, ಬಳೆಗಳು, ಚಿನ್ನದ ಗಟ್ಟಿ, ಚಿನ್ನದ ನಾಣ್ಯಗಳು, ಚಿನ್ನದ ಬಿಸ್ಕೇಟ್’ಗಳು ಸಿಕ್ಕಿವೆ. ಸುಮಾರು 7 ಕೆ.ಜಿ ತೂಕದ ಚಿನ್ನಾಭರಣ ಪತ್ತೆಯಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ. ಇದರ ಮೌಲ್ಯ ಅಂದಾಜು 3.5 ಕೋಟಿ ರೂ. ಎಂದು ಹೇಳಲಾಗುತ್ತಿದೆ.
ಕಂತೆ ಕಂತೆ ಹಣ ಪತ್ತೆ
ರಾಶಿ ಚಿನ್ನದ ಜೊತೆಗೆ ರುದ್ರೇಶಪ್ಪ ಮನೆಯಲ್ಲಿ ಕಂತೆ ಕಂತೆ ಹಣವು ಸಿಕ್ಕಿದೆ. ಐನೂರು ರೂ. ನೋಟುಗಳ ಕಂತೆಗಳು, ಎರಡು ಸಾವಿರ ರೂ. ನೋಟಿನ ಕಂತೆಗಳನ್ನು ಕೂಡ ಸಿಕ್ಕಿವೆ. ಇವುಗಳ ಮೌಲ್ಯ ಇನ್ನಷ್ಟೆ ತಿಳಿದ ಬರಬೇಕಿದೆ.
44 ಅಧಿಕಾರಿಗಳು, 5 ತಂಡಗಳು
ದಾವಣಗೆರೆಯಲ್ಲಿರುವ ಪೂರ್ವ ವಲಯ ಎಸಿಬಿ ಕಚೇರಿಯ ಎಸ್.ಪಿ ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. 44 ಅಧಿಕಾರಿಗಳು, 5 ತಂಡಗಳಲ್ಲಿ, ಐದು ಪ್ರತ್ಯೇಕ ಸ್ಥಳದಲ್ಲಿ ದಾಲಿ ನಡೆಸಲಾಗಿದೆ. ಶೋಧ ಕಾರ್ಯ ಇನ್ನೂ ಮುಂದುವರೆದಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200