ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 21 AUGUST 2024 : ರಿವೀವ್, ವರ್ಕ್ ಫ್ರಮ್ ಹೋಮ್ ಮತ್ತು ಟಾಸ್ಕ್‌ಗಳನ್ನು (task) ಪೂರೈಸಿದರೆ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ನಂಬಸಿ ಸರ್ಕಾರಿ ನೌಕರರೊಬ್ಬರಿಗೆ 54 ಲಕ್ಷ ರೂ. ವಂಚಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಟೆಲಿಗ್ರಾಂನಲ್ಲಿ ಫುಡ್ ರಿವೀವ್
ಸರ್ಕಾರಿ ನೌಕರ (ಹೆಸರು ಗೌಪ್ಯ) ಟೆಲಿಗ್ರಾಂ ಖಾತೆ ನೋಡುತ್ತಿದ್ದಾಗ ವರ್ಕ್ ಫ್ರಮ್ ಹೋಮ್ ಎಂದು ಮೆಸೇಜ್ ಬಂದಿತ್ತು. ಪರಿಶೀಲಿಸಿದಾಗ ವೆಬ್‌ಸೈಟ್ ಒಂದರಲ್ಲಿ ರಿಜಿಸ್ಟರ್ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ನೋಂದಣಿ ಮಾಡುತ್ತಿದ್ದಂತೆ ಆಹಾರ ಸಾಮಗ್ರಿಯೊಂದನ್ನು ಖರೀದಿಸಿ ಅದರ ಕುರಿತು ವಿಮರ್ಶೆ ಬರೆಯುವಂತೆ ತಿಳಿಸಲಾಗಿತ್ತು. ಇದಕ್ಕೆ ಕಮಿಷನ್ ಕೊಡುವುದಾಗಿ ನಂಬಿಸಿದ್ದರು.
ವೆಬ್‌ಸೈಟ್‌ನಲ್ಲಿ ಕಾಣುತ್ತಿತ್ತು ಕಮಿಷನ್
ರಿವೀವ್ ಬರೆದು ಸಲ್ಲಿಸುತ್ತಿದ್ದಂತೆ ಈ ಮೊದಲೆ ರಿಜಿಸ್ಟರ್ ಆಗಿದ್ದ ವೆಬ್‌ಸೈಟ್‌ನಲ್ಲಿ ಕಮಿಷನ್ ಹಣದ ವಿವರ ಕಾಣುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆ ಬಳಿಕ ಟಾಸ್ಕ್‌ಗಳನ್ನು ಪೂರೈಸಿ ಹೆಚ್ಚಿನ ಲಾಭಾಂಶದ ಆಸೆ ಹುಟ್ಟಿಸಿ, ಸರ್ಕಾರಿ ನೌಕರನಿಂದ ಹಣ ಕಟ್ಟಿಸಿಕೊಂಡಿದ್ದಾರೆ. ಜುಲೈ 29 ರಿಂದ ಆಗಸ್ಟ್ 12ರವರೆಗೆ ಸರ್ಕಾರಿ ನೌಕರ ಹಂತ ಹಂತವಾಗಿ 54.64 ಲಕ್ಷ ರೂ. ಹಣ ಕಟ್ಟಿರುವುದಾಗಿ ದೂರಿನಲ್ಲಿ ವಿವರಿಸಿದ್ದಾನೆ. ಆದರೆ ಲಾಭಾಂಶದ ಹಣ ಕೊಡದೆ ವಂಚಿಸಿದ್ದರಿಂದ ಅನುಮಾನಗೊಂಡು ವಿಚಾರಿಸಿದಾಗ ವಂಚನೆಗೊಳಗಾದ ಅರಿವಾಗಿದೆ. ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇒ BREAKING NEWS | ಆಯನೂರಿನಲ್ಲಿ ಬೇಕರಿಗೆ ಬೆಂಕಿ, ಸಿಲಿಂಡರ್‌ಗಳು ಸ್ಪೋಟ, ಧಗಧಗ ಹೊತ್ತಿ ಉರಿದ ಅಂಗಡಿ