SHIVAMOGGA LIVE NEWS | STONE PELTING | 07 ಮೇ 2022
ಶಿವಮೊಗ್ಗದ ಸೂಳೆಬೈಲಿನಲ್ಲಿ ಕಳೆದ ರಾತ್ರಿ ಕಾರಿನ ಮೇಲೆ ಕಲ್ಲು ತೂರಿದ ಘಟನೆ ಸಂಬಂಧ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹರಿಕೃಷ್ಣ ಅವರು ತೆರಳುತ್ತಿದ್ದ ಕಾರಿನ ಮೇಲೆ ದಾಳಿಯಾಗಿದೆ ಎಂದು ವದಂತಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಅವರು ಇವತ್ತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹರಿಕೃಷ್ಣ ಹೇಳಿದ್ದೇನು?
ಪಾಯಿಂಟ್ 1 – ನನ್ನ ಗೆಳೆಯರ ಕಾರಿನ ಮೇಲೆ ದಾಳಿಯಾಗಿದೆ. ಆ ಕಾರಿನಲ್ಲಿ ನಾನು ಇರಲ್ಲಿಲ್ಲ. ಅದು ನನ್ನ ಕಾರು ಕೂಡ ಅಲ್ಲ. ಕೆಲವು ಪತ್ರಿಕೆ, ಮಾಧ್ಯಮಗಳಲ್ಲಿ ತಾವು ಇದ್ದ ಕಾರಿನ ಮೇಲೆ ದಾಳಿಯಾಗಿದೆ ಎಂದು ವರದಿಯಾಗಿದೆ. ಆದರೆ ತಾನು ಕಾರಿನಲ್ಲಿ ಇರಲಿಲ್ಲ.
ಪಾಯಿಂಟ್ 2 – ಸೂಳೆಬೈಲು ಭಾಗದಲ್ಲಿ ಮುಸ್ಲಿಂ ಬಾಹುಳ್ಯ ಹಚ್ಚಿದೆ. ಈ ಭಾಗದಲ್ಲಿ ಮುಸ್ಲಿಮರು ಅಲ್ಲಲ್ಲಿ ಗುಂಪುಗೂಡಿ ನಿಲ್ಲುತ್ತಾರೆ. ಕಳೆದೊಂದು ವಾರದಿಂದ ಸಣ್ಣ ಪ್ರಮಾಣ ಹಿಂಸೆ ಆರಂಭಿಸಿದ್ದಾರೆ. ಹಿಂದೂಗಳನ್ನು ಪ್ರಚೋದಿಸುತ್ತಿದ್ದಾರೆ. ಜಗಳಕ್ಕೆ ಕರೆಯುವಂತೆ ಮಾಡುತ್ತಿದ್ದಾರೆ.
ಪಾಯಿಂಟ್ 3 – ಅನೇಕ ಹಿಂದೂಗಳು ಈ ಹಿಂಸೆ ಅನುಭವಿಸಿದ್ದಾರೆ. ಹಾಗಾಗಿಯೆ ರಾತ್ರಿ ವಿಚಾರ ತಿಳಿಯುತ್ತಿದ್ದಂತೆ ಎಲ್ಲರೂ ಒಗ್ಗೂಡಿ ಪ್ರತಿಭಟನೆ ನಡೆಸಿದರು.
ಪಾಯಿಂಟ್ 4 – ಹರ್ಷ ಹತ್ಯೆ ಬಳಿಕ ಈ ರೀತಿಯ ಘಟನೆಗಳು ಇನ್ನೊಂದೆರಡು ಕಡೆ ನಡೆದಿದೆ. ಪೊಲೀಸ್ ಇಲಾಖೆ ಇದನ್ನು ಬೇರೆ ಬೇರೆ ಘಟನೆಯಾಗಿ ಪರಿಗಣಿಸಬಾರದು. ಇದು ಕೋಮು ಗಲಭೆಯಲ್ಲ. ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿ.
ಪಾಯಿಂಟ್ 5 – ಕಳೆದ ರಾತ್ರಿಯೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕರೆ ಮಾಡಿದ್ದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪೊಲೀಸರಿಗು ಕೂಡ ಕಾನೂನು ಕ್ರಮ ಕೈಗೊಳ್ಳುವ ಕುರಿತು ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಕಾರಿನ ಮೇಲೆ ಕಲ್ಲು ತೂರಾಟ, ಗ್ಲಾಸ್ ಪೀಸ್, ಪೀಸ್, ಬಿಗುವಿನ ವಾತಾವರಣ