ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 12 FEBRUARY 2024
BHADRAVATHI : ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಬೀಗ ಮುರಿದು ಕೊಠಡಿಯ ಬೀರುವಿನಲ್ಲಿದ್ದ 20 ಸಾವಿರ ರೂ. ನಗದು ಸೇರಿದಂತೆ 1.49 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು ಕಳ್ಳತನ ಮಾಡಲಾಗಿದೆ. ಭದ್ರಾವತಿ ತಾಲೂಕು ಜೇಡಿಕಟ್ಟೆ ಹೊಸೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಮಂಜುನಾಥ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅಜ್ಜಿ ತೀರಿಕೊಂಡಿದ್ದರಿಂದ ಮಂಜುನಾಥ್ ಅವರು ಕುಟುಂಬ ಸಹಿತ ಚಿಕ್ಕಮಗಳೂರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಬಾಗಿಲಿನ ಬೀಗ ಮುರಿದಿದ್ದಾರೆ.
ಕಾರ್ಯಗಳನ್ನು ಮುಗಿಸಿ ಫೆ.8ರಂದು ಮಂಜುನಾಥ್ ಮತ್ತು ಅವರ ಕುಟುಂಬದವರು ಬಂದಾಗ ಮನೆ ಮುಂಬಾಗಿಲು ತೆಗೆದಿತ್ತು. ಕೊಠಡಿಗಳಲ್ಲಿ ವಿದ್ಯುತ್ ದೀಪ ಆನ್ ಆಗಿದ್ದವು. ಒಳ ಹೋಗಿ ನೋಡಿದಾಗ ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಘಟನೆ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ, ಅರ್ಜಿ ಸಲ್ಲಿಸಿದ ಶಿವಮೊಗ್ಗದ ಯುವಕರಿಗೆ ಕಾದಿತ್ತು ದೊಡ್ಡ ಆಘಾತ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422