ಆಟೋದಲ್ಲಿ ಬಂತು ಐದು ಬಾಳೆಗೊನೆ, ಪರಿಶೀಲಿಸಿದ ಪೊಲೀಸರಿಗೆ ಕಾದಿತ್ತು ಶಾಕ್‌, ಆಗಿದ್ದೇನು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ಕೇಂದ್ರ ಕಾರಾಗೃಹದ ಕ್ಯಾಂಟೀನ್‌ಗೆ ತಂದಿದ್ದ ಬಾಳೆಗೊನೆಗಳಲ್ಲಿ ಗಾಂಜಾ, ಸಿಗರೇಟ್‌ಗಳು ಪತ್ತೆಯಾಗಿವೆ. ಜೈಲು ಭದ್ರತೆ ನಿರ್ವಹಿಸುತ್ತಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF) ಸಿಬ್ಬಂದಿ ಇದನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನ.19ರಂದು ಮಧ್ಯಾಹ್ನ 2.15ರ ಹೊತ್ತೆಗೆ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಆಟೋ ಒಂದರಲ್ಲಿ ಐದು ಬಾಳೆಗೊನೆ ತರಲಾಗಿತ್ತು. ಕ್ಯಾಂಟೀನ್‌ನವರ ಸೂಚನೆ ಮೇರೆಗೆ ಇವುಗಳನ್ನು ತರಲಾಗಿದೆ ಎಂದು ಗೇಟ್‌ ಮುಂಭಾಗ ಇರಿಸಲಾಗಿತ್ತು.

ಕೆಎಸ್‌ಐಎಸ್‌ಎಫ್‌ ಇನ್ಸ್‌ಪೆಕ್ಟರ್‌ ಜಗದೀಶ್‌, ಪಿಎಸ್‌ಐ ಪ್ರಭು, ಸಿಬ್ಬಂದಿ ಪ್ರವೀಣ್‌ ಮತ್ತು ನಿರೂಪಬಾಯಿ, ಐದು ಬಾಳೆಗೊನೆಗಳನ್ನು ಪರಿಶೀಲಿಸಿದರು. ಆಗ ಬಾಳೆಗೊನೆಯ ದಿಂಡು ಕೊರೆದು ಅದರೊಳಗೆ ಗಾಂಜಾ ಮತ್ತು ಸಿಗರೇಟುಗಳನ್ನು ಟೇಪ್‌ ಸುತ್ತಿ ಇಟ್ಟಿರುವುದು ಗೊತ್ತಾಗಿದೆ.

ಇದನ್ನೂ ಓದಿ » ಒಳ ಉಡುಪಿನಲ್ಲಿ ಗಾಂಜಾ ತಂದ ಅಧಿಕಾರಿ, ಸಿಕ್ಕಿಬಿದ್ದಿದ್ದು ಹೇಗೆ?

ಬಾಳೆ ದಿಂಡಿನಲ್ಲಿ 123 ಗ್ರಾಂ ಗಾಂಜಾ, 40 ಸಿಗರೇಟುಗಳು ಸಿಕ್ಕಿವೆ ಎಂದು ಆರೋಪಿಸಾಗಿದೆ. ಘಟನೆ ಸಂಬಂಧ ಜೈಲು ಮುಖ್ಯ ಅಧೀಕ್ಷಕ ಡಾ. ರಂಗನಾಥ್‌ ದೂರು ನೀಡಿದ್ದು, ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ನೆಹರು ಕ್ರೀಡಾಂಗಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ, ಪೊಲೀಸರಿಂದ ಪರಿಶೀಲನೆ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment