ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 14 MAY 2024
SHIMOGA : ಬಸ್ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನ ಒಳಗೆ ಕರ್ಚೀಫ್ನಲ್ಲಿ ಕಟ್ಟಿಟ್ಟಿದ್ದ ಚಿನ್ನಭಾರಣ (Jewelry) ಕಳುವಾಗಿದೆ. ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ನ್ಯಾಮತಿ ತಾಲೂಕು ಚೀಲೂರು ನಿವಾಸಿ ಫಾಸಿಹಾ ಎಂಬುವವರ ವ್ಯಾನಿಟಿ ಬ್ಯಾಗ್ನಿಂದ ಚಿನ್ನಾಭರಣ ಕಳವು ಮಾಡಲಾಗಿದೆ.
ಫಾಸಿಹಾ ಅವರು ಸಂಬಂಧಿಯ ಮದುವೆ ಸಮಾರಂಭ ಮುಗಿಸಿ ಅಕ್ಕ ಮತ್ತು ತಮ್ಮನ ಪತ್ನಿ ಜೊತೆಗೆ ಮನೆಗೆ ಮರಳುತ್ತಿದ್ದರು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ರಶ್ ಇತ್ತು. ಬಸ್ ಹತ್ತಿ ಟಿಕೆಟ್ ಮಾಡಿಸಲು ಆಧಾರ್ ಕಾರ್ಡ್ ತೆಗೆಯಲು ವ್ಯಾನಿಟಿ ಬ್ಯಾಗ್ನತ್ತ ಗಮನ ಹರಿಸಿದಾಗ ಜಿಪ್ ತೆಗೆದಿತ್ತು. ಕರ್ಚೀಫ್ನಲ್ಲಿ ಆಭರಣಗಳನ್ನು ಕಟ್ಟಿಟ್ಟಿದ್ದು ನಾಪತ್ತೆಯಾಗಿತ್ತು. 1.12 ಲಕ್ಷ ರೂ. ಮೌಲ್ಯದ ಆಭರಣ ಕಳ್ಳನತವಾಗಿದೆ ಎಂದು ಫಾಸಿಹಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್ನಿಂದ ಚಿನ್ನಾಭರಣ ಕಳ್ಳತನ ಅಗುತ್ತಿರುವುದು ಇದೇ ಮೊದಲೇನಲ್ಲ. ಪ್ರಯಾಣಿಕರ ದಟ್ಟಣೆ ಇರುವ ಸಂದರ್ಭ ನೂಕುನುಗ್ಗಲಿನಲ್ಲಿ ವ್ಯಾನಿಟಿ ಬ್ಯಾಗ್ನಿಂದ ಚಿನ್ನಾಭರಣ, ನಗದು ಕಳವು ಮಾಡಲಾಗುತ್ತಿದೆ. ಬಸ್ ಹತ್ತುವ ಸಂದರ್ಭ ಮಹಿಳೆಯರು ಎಚ್ಚರ ವಹಿಸಿದರೆ ಕಳ್ಳರ ಹಾವಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ – ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿ ಯಮನಂತೆ ಎದುರಿಗೆ ಬಂತು ಟ್ರಾಕ್ಟರ್, ವ್ಯಕ್ತಿ ಸಾವು
LATEST NEWS
- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






