ದಿಢೀರ್‌ ಕಟ್‌ ಆಯ್ತು ಜಿಯೋ ಸಿಗ್ನಲ್‌, ಟವರ್‌ ಬಳಿ ಹೋದ ಸಿಬ್ಬಂದಿಗೆ ಕಾದಿತ್ತು ಶಾಕ್

 ಶಿವಮೊಗ್ಗ  LIVE 

ಶಿವಮೊಗ್ಗ: ಶ್ರೀರಾಂಪುರ ಗ್ರಾಮದ ರಿಲಯನ್ಸ್ ಜಿಯೋ ಟವರ್‌ಗೆ (Jio tower) ಅಳವಡಿಸಿದ್ದ ಲೀಥಿಯಂ ಬ್ಯಾಟರಿಗಳನ್ನು ಕಳ್ಳತನ ಮಾಡಲಾಗಿದೆ. 4 ಬ್ಯಾಟರಿಗಳು ಕಳುವಾಗಿದ್ದು ಅವುಗಳ ಮೌಲ್ಯ ₹3,36,088 ಎಂದು ಅಂದಾಜಿಸಲಾಗಿದೆ.

ಶ್ರೀರಾಂಪುರದಲ್ಲಿ ಜಮೀನಿನಲ್ಲಿ ಟವರ್ ಅಳವಡಿಸಲಾಗಿದೆ. ಅದರ ಕಾರ್ಯನಿರ್ವಹಣೆಗಾಗಿ ಒಟ್ಟು 6 ಬ್ಯಾಟರಿಗಳನ್ನು ಇರಿಸಲಾಗಿತ್ತು. ಟವರ್‌ನ ಸಿಗ್ನಲ್ ಸ್ಥಗಿತಗೊಂಡ ಬಗ್ಗೆ ಅಲಾರಂ ಬಂದಿತ್ತು. ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಒಟ್ಟು 6 ಬ್ಯಾಟರಿಗಳ ಪೈಕಿ 4 ಬ್ಯಾಟರಿಗಳನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮನೆಯೊಳಗೆ ನುಗ್ಗಿ ವೃದ್ಧೆಯ ಕೈಲಿದ್ದ ರೋಲ್ಡ್‌ ಗೋಲ್ಡ್‌ ಬಳೆ ಕದ್ದೊಯ್ದ ಕಳ್ಳರು..!

ಜಿಯೋ ಸಂಸ್ಥೆಯ ಎಸ್ಟೇಟ್ ಆಫೀಸರ್ ಹನುಮಂತ ಗೌಡ ಅವರು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.‌

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment