ಶಿವಮೊಗ್ಗ: ನಗರದ ಸೋಮಿನಕೊಪ್ಪ ಮೇಲ್ಸೇತುವೆ ಬಳಿ ಇಂದು ಮಧ್ಯಾಹ್ನ ರೈಲಿಗೆ (passenger train) ಸಿಲುಕಿ ವೃದ್ಧರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ವಿನೋಬನಗರದ ಕಲ್ಲಹಳ್ಳಿಯ ನಿವಾಸಿ ಈಶ್ವರಪ್ಪ (68) ಎಂದು ಗುರುತಿಸಲಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ತಾಳಗುಪ್ಪ – ಶಿವಮೊಗ್ಗ ಪ್ಯಾಸೆಂಜರ್ ರೈಲಿಗೆ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಈಶ್ವರಪ್ಪ ಅವರ ದೇಹ ಎರಡು ಭಾಗವಾಗಿ ಹಳಿಯ ಮೇಲೆ ಬಿದ್ದಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ – ಒಂದು ಮೆಸೇಜ್, ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ₹6.50 ಲಕ್ಷ ಮಾಯ, ಏನಿತ್ತು ಮೆಸೇಜ್‌ನಲ್ಲಿ?

LATEST NEWS
- ಶಿವಮೊಗ್ಗದಲ್ಲಿ ಹಾಲಿನ ಪ್ಯಾಕೆಟ್ ಕಳ್ಳರ ಹಾವಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

- KFD ಸೋಂಕಿಗೆ ಮೊದಲ ಬಲಿ, ತೀರ್ಥಹಳ್ಳಿಯ ಯುವಕ ಮಣಿಪಾಲದಲ್ಲಿ ಸಾವು

- ಶಿವಮೊಗ್ಗ ಸಮೀಪ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್ಸು, ಅದೃಷ್ಟವಶಾತ್ ಪ್ರಯಾಣಿಕರು ಪಾರು, ಆಗಿದ್ದೇನು?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 27 ಜನವರಿ 2026 | ಅಡಿಕೆ ಧಾರಣೆ

- ಶಿವಮೊಗ್ಗದ ವಸತಿ ಶಾಲೆಯ 17 ವಿದ್ಯಾರ್ಥಿನಿಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲು, ಜಿಲ್ಲಾಧಿಕಾರಿ, ಸಿಇಒ ಭೇಟಿ

About The Editor
ನಿತಿನ್ ಆರ್.ಕೈದೊಟ್ಲು





