ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 NOVEMBER 2023
BHADRAVATHI : ಚಲಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿಯಾಗಿ (mishap) ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭದ್ರಾವತಿ ತಾಲೂಕು ಶಂಕರಘಟ್ಟದಲ್ಲಿ ಘಟನೆ ಸಂಭವಿಸಿದೆ.
ಗುರುವಾರ ಮಧ್ಯಾಹ್ನ ಶಂಕರಘಟ್ಟ ಬಸ್ ನಿಲ್ದಾಣದ ಸಮೀಪ ಖಾಸಗಿ ಬಸ್ ಮೊಪೆಡ್‌ಗೆ ಹಿಂಬದಿಯಿಂದ ಡಿಕ್ಕಿ (mishap) ಹೊಡೆದಿದೆ. ಹೆಚ್.ಕೆ.ಜಂಕ್ಷನ್ ರಂಗನಾಥಪುರದ ಶಂಕರಪ್ಪ (60) ಅವರ ತಲೆ ಮೇಲೆ ಬಸ್ ಚಕ್ರ ಹರಿದಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ- ಸಾಗರ – ಸೊರಬ – ಶಿಕಾರಿಪುರದಿಂದ ಬೆಂಗಳೂರಿಗೆ ಎರಡು KSRTC ಪಲ್ಲಕ್ಕಿ ಬಸ್, ಟೈಮಿಂಗ್ ಪ್ರಕಟ
ಬಸ್ ಬಿಟ್ಟು ಪರಾರಿಯಾದ ಚಾಲಕ
ಬಿ.ಆರ್.ಪಿಯಿಂದ ಕಿರಾಣಿ ಅಂಗಡಿಗೆ ಶಂಕರಪ್ಪ ಅವರು ವಸ್ತುಗಳನ್ನು ತರುತ್ತಿದ್ದರು. ಈ ಸಂದರ್ಭ ಘಟನೆ ಸಂಭವಿಸಿದೆ. ಅಪಘಾತಪಡಿಸಿ ಬಸ್ಸನ್ನು ಸ್ವಲ್ಪ ದೂರಕ್ಕೆ ಕೊಂಡೊಯ್ದು ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಚಾಲಕ ಮಂಜುನಾಥ್ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೇಗಕ್ಕೆ ಬೀಳುತ್ತಾ ಬ್ರೇಕ್?
ಶಂಕರಘಟ್ಟದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್ ಇದೆ. ಅಕ್ಕಪಕ್ಕದಲ್ಲಿ ವಿವಿಧ ಶಾಲೆಗಳಿವೆ. ಅಂಗಡಿ ಮುಂಗಟ್ಟು ಹೆಚ್ಚಿದೆ. ಆದ್ದರಿಂದ ಈ ಭಾಗದಲ್ಲಿ ಜನ ಸಂದಣಿ ಹೆಚ್ಚು. ಹಾಗಿದ್ದು ಶಂಕರಘಟ್ಟ ಮುಖ್ಯ ರಸ್ತೆಯಲ್ಲಿ ವಾಹನಗಳು ನಿಗದಿಗಿಂತಲು ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿವೆ. ಭಾರೀ ವಾಹನಗಳು ಕೂಡ ಇಲ್ಲಿ ವೇಗ ತಗ್ಗಿಸುವುದಿಲ್ಲ ಎಂಬ ಆರೋಪವಿದೆ. ಇದೇ ಕಾರಣಕ್ಕೆ ಶಂಕರಘಟ್ಟದಲ್ಲಿ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422