SAGARA NEWS, 19 OCTOBER 2024 : MSIL ಮದ್ಯದ ಮಳಿಗೆ ಬಾಗಿಲು ಮುರಿದು ಹಣ ಮತ್ತು ಮದ್ಯ ಕಳವು ಮಾಡಲಾಗಿದೆ. ಸಾಗರ ತಾಲೂಕು ಗೌತಮಪುರ ಗ್ರಾಮದ ಮದ್ಯದ ಅಂಗಡಿಯಲ್ಲಿ ಘಟನೆ ಸಂಭವಿಸಿದೆ.
ಬೆಳಗ್ಗೆ 11 ಗಂಟೆಗೆ ಮದ್ಯದ ಅಂಗಡಿ ಬಾಗಿಲು ತೆಗೆಯಲು ಸಿಬ್ಬಂದಿ ಬಂದಾಗ ರೋಲಿಂಗ್ ಷಟರ್ ಮುರಿದಿರುವುದು ಗೊತ್ತಾಗಿದೆ. ಒಳಗೆ ಪರಿಶೀಲಿಸಿದಾಗ ಕ್ಯಾಶ್ ಡ್ರಾದಲ್ಲಿದ್ದ 12,350 ರೂ. ಹಣ ಕಳುವಾಗಿತ್ತು. ಇನ್ನು, ಮದ್ಯದ ರಾಕ್‌ನಲ್ಲಿ ಪರಿಶೀಲಿಸಿದಾಗ 8960 ರೂ. ಮೌಲ್ಯದ ವಿವಿಧ ಬ್ರಾಂಡ್‌ನ ಮದ್ಯ ಕಳುವಾಗಿತ್ತು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಇದನ್ನೂ ಓದಿ » ಜಾನುವಾರು ಮೈ ತೊಳೆಯಲು ಹೋದ ಯುವಕ ನೀರಿನಲ್ಲಿ ಮುಳುಗಿ ಕೊನೆಯುಸಿರು
ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:➤ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ, ಸರ್ಕಾರಿ ಜಮೀನು ಒತ್ತುವರಿ ತೆರವು, ಕಬ್ಬಿಣದ ಗೇಟ್ ಕಿತ್ತೊಗೆದು ಎಚ್ಚರಿಕೆ