ಮನೆ ಹೆಂಚು ತೆಗೆದು ಇಳಿದ ಕಳ್ಳ ಜೈಲುಪಾಲು

SORABA NEWS, 17 NOVEMBER 2024 : ಮನೆಯ (House) ಹೆಂಚು ತೆಗೆದು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 50 ಸಾವಿರ ರೂ. ಮೌಲ್ಯದ ಆಭರಣ ಮತ್ತು 50 ಸಾವಿರ ರೂ. ನಗದು ವಶಕ್ಕೆ ಪಡೆದಿದ್ದಾರೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಪಟ್ಟಣದ ಅಂಬೇಡ್ಕರ್ ಬಡಾವಣೆಯ ನಿವಾಸಿ ಗೋಪಿ ದೇವೇಂದ್ರಪ್ಪ ಬಂಧಿತ. ಒಂದು ತಿಂಗಳ ಹಿಂದೆ ಕಾನುಕೇರಿ ಬಡಾವಣೆಯ ನಾಗರಾಜ್ ಅವರ ಮನೆಯಲ್ಲಿ ಯಾರೂ ಇಲ್ಲದಾಗ ಮನೆಯ ಹೆಂಚು ತೆಗೆದು ಕಳ್ಳತನ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಖಾಸಗಿ ಬಸ್‌ ನಿಲ್ದಾಣ, ಪಾರ್ಸಲ್‌ ಕೊಟ್ಟು ಹಿಂತಿರುಗಿದ ಯುವಕನಿಗೆ ಕಾದಿತ್ತು ಶಾಕ್

House

Leave a Comment