ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಜುಲೈ 2021
ಬಸ್ ತಂಗುದಾಣದಲ್ಲಿ ಮಹಿಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ಎನ್.ಟಿ.ರಸ್ತೆಯ ಗಾಜನೂರು ಬಸ್ ತಂಗುದಾಣದಲ್ಲಿ ಘಟನೆ ಸಂಭವಿಸಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಲತಾಬಾಯಿ (40) ಎಂಬಾಕೆಯ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಬಳ್ಳಾರಿ ಜಿಲ್ಲೆಯ ಕೋಮಾರನಹಳ್ಳಿ ತಾಂಡಾದ ದೇವೇಂದ್ರ (27) ಎಂಬಾತನನ್ನು ಬಂಧಿಸಲಾಗಿದೆ.
ಹತ್ಯೆಗೆ ಕಾರಣವೇನು?
ಸುಮಾರು 10 ತಿಂಗಳಿಂದ ಹೊಸಹಳ್ಳಿಯ ಲತಾಬಾಯಿಗೆ ಬಳ್ಳಾರಿಯ ದೇವೇಂದ್ರನ ಜೊತೆಗೆ ಒಡನಾಟ ಇತ್ತು. ಜುಲೈ 1ರಂದು ರಾತ್ರಿ ಮದ್ಯ ಕುಡಿಯುವ ವಿಚಾರದಲ್ಲಿ ದೇವೇಂದ್ರ ಮತ್ತು ಲತಾಬಾಯಿ ನಡುವೆ ಜಗಳವಾಗಿತ್ತು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | ಬಸ್ ನಿಲ್ದಾಣದಲ್ಲಿ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ
ಜುಲೈ 2ರ ಬೆಳಗಿನ ಜಾವ ಗಾರ್ಡನ್ ಏರಿಯಾದಲ್ಲಿ ಲತಾಬಾಯಿ ಮೇಲೆ ಮಾನಭಂಗಕ್ಕೆ ಯತ್ನಿಸಿ, ಗೋಡೆಗೆ ತಳ್ಳಿ ಹತ್ಯೆ ಯತ್ನ ಮಾಡಿದ್ದಾಗಿ ದೇವೇಂದ್ರ ತಪ್ಪೊಪ್ಪಿಕೊಂಡಿದ್ದಾನೆ.
ಜುಲೈ 2ರಂದು ಬೆಳಗ್ಗೆ ಮಹಿಳೆಯೊಬ್ಬಳ ಹತ್ಯೆ ಆಗಿರುವುದು ಬೆಳಕಿಗೆ ಬಂದಿತ್ತು. ತನಿಖೆ ನಡೆಸಿದ ಪೊಲೀಸರ ಜುಲೈ 12ರಂದು ದೇವೇಂದ್ರನನ್ನು ಬಂಧಿಸಿದ್ದಾರೆ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200