ಶಿವಮೊಗ್ಗ ಗಾಂಧಿನಗರದಲ್ಲಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದವನು 20 ರೂ. ಇ- ಸ್ಟಾಂಪ್‌ನಿಂದ ಸಿಕ್ಕಿಬಿದ್ದ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 MARCH 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಸೇರಿದಂತೆ ನಕಲಿ ದಾಖಲೆಗಳನ್ನು ಮಾಡಿಕೊಡುತ್ತಿದ್ದ  ಕಂಪ್ಯೂಟರ್ ಸೆಂಟರ್ ಮಾಲೀಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನು ನೇಪಾಳ ಮೂಲದ ಗಾಂಧಿ ನಗರ ನಿವಾಸಿ ವಿಷ್ಣು ಭಕ್ತ ಎಂದು ತಿಳಿದು ಬಂದಿದೆ.

ಗಾಂಧಿ ನಗರದ ಕಂಪ್ಯೂಟರ್ ಅಂಗಡಿಯೊಂದರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಆರೋಪವಿದೆ. ಅಸಲಿ ದಾಖಲೆಗೆ ಹೋಲುವಂತಹ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಮಾಡುತ್ತಿದ್ದ. ಐದಾರು ವರ್ಷದಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ.

ವಂಚಕರು ಸಿಕ್ಕಿಬಿದ್ದಿದ್ದು ಹೇಗೆ?

ಕಂಪ್ಯೂಟರ್ ಅಂಗಡಿಯಲ್ಲಿ ನಡೆಯುತ್ತಿರುವ ಕಳ್ಳ ದಂಧೆ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಕಂಪ್ಯೂಟರ್ ಸೆಂಟರ್ ಮಾಲೀಕ ವಿಷ್ಣು ಭಕ್ತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

20 ರೂ ಇ – ಸ್ಟಾಂಪ್ ಕೊಂಡೊಯ್ದ ಪೊಲೀಸರು, ವಿಷ್ಣು ಭಕ್ತನಿಗೆ ಕೊಟ್ಟು, ಇದೆ ಮಾದರಿಯ ನಕಲಿ ಇ – ಸ್ಟಾಂಪನ್ನು ಹಳೆಯ ದಿನಾಂಕ್ಕೆ ಮಾಡಿಕೊಡಬೇಕು. ಅದರ ಮುಖಬೆಲೆಯನ್ನು 100 ರೂ.ಗೆ ಬದಲಾಯಿಸಬೇಕು ಎಂದು ಮನವಿ ಮಾಡಿದರು. ಕೆಲವೇ ನಿಮಿಷದಲ್ಲಿ ಅಸಲಿಯನ್ನೇ ಹೋಲುವಂತಹ ನಕಲಿ ಇ – ಸ್ಟಾಂಪ್‍ ಪೇಪರ್ ಹಳೆ ದಿನಾಂಕಕ್ಕೆ ಮಾಡಿಕೊಟ್ಟಿದ್ದ. ಇದರ ಆಧಾರದ ಮೇಲೆ ವಿಷ್ಣು ಭಕ್ತನನ್ನು ಬಂಧಿಸಲಾಗಿದೆ.

ವಿನೋಬನಗರ ಠಾಣೆ ಇನ್ಸ್‍ ಪೆಕ್ಟರ್ ರವಿ ಅವರ ಮಾರ್ಗದರ್ಶನದಲ್ಲಿ ಜಯನಗರ ಠಾಣೆಯ ಪ್ರಕಾಶ್ ಮತ್ತು ವಿನೋಬನಗರದ ಶಿವಪ್ಪ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment