ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಸೆಪ್ಟೆಂಬರ್ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಖಾಸಗಿ ನರ್ಸಿಂಗ್ ಹೋಂ ಒಂದರ ವೈದ್ಯರಿಗೆ ಬಿಎಸ್ಎನ್ಎಲ್ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ವಂಚಿಸಿದ್ದಾನೆ. ನಿಮ್ಮ ಮೊಬೈಲ್ ನಂಬರ್ ಬ್ಲಾಕ್ ಆಗಲಿದೆ ಎಂದು ಹೆದರಿಸಿ, ಕೆಲವು ಮಾಹಿತಿಗಳನ್ನ ಪಡೆದು, ಅವರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಲಾಗಿದೆ.
ಖಾಸಗಿ ನರ್ಸಿಂಗ್ ಹೋಂನ ವೈದ್ಯರಿಗೆ ಕರೆ ಮಾಡಿದ ವಂಚಕನೊಬ್ಬ ತನ್ನನ್ನು ಬಿಎಸ್ಎನ್ಎಲ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ ನಿಮ್ಮ ಮೊಬೈಲ್ ನಂಬರ್ ಬ್ಲಾಕ್ ಆಗಲಿದೆ ಎಂದು ಹೆದರಿಸಿದ್ದಾನೆ.
‘ಆಧಾರ್ ಜೊತೆಗೆ ಲಿಂಕ್ ಮಾಡಿ’
ನಿಮ್ಮ ಮೊಬೈಲ್ ನಂಬರನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಕೊಳ್ಳಿ ಎಂದು ತಿಳಿಸಿದ್ದಾನೆ. ಅದರ ಜೊತೆಗೆ ಕೆಲವು ಮಾಹಿತಿ ಪಡೆದುಕೊಂಡಿದ್ದಾನೆ. ಬಿಎಸ್ಎನ್ಎಲ್ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿ ಕೇಳಿದ ಮಾಹಿತಿಗಳನ್ನು ವೈದ್ಯರು ಒದಗಿಸಿದ್ದಾರೆ. ಕರೆ ಕಟ್ ಆದ ಕೆಲವೇ ಕ್ಷಣದಲ್ಲಿ ವೈದ್ಯರ ಮೊಬೈಲ್’ಗೆ ಮೆಸೇಜ್ ಬಂದಿದೆ.
ವೈದ್ಯರ ಢವಢವ ಹೆಚ್ಚಿಸಿದ ಮೆಸೇಜ್
ವೈದ್ಯರ ಮೊಬೈಲ್’ಗೆ ಬಂದ ಮೆಸೇಜಿನಲ್ಲಿ ಬ್ಯಾಂಕ್ ಖಾತೆಯಿಂದ 49 ಸಾವಿರ ರೂ. ಡ್ರಾ ಆಗಿರುವುದಾಗಿ ತಿಳಿಸಲಾಗಿತ್ತು. ಮೆಸೇಜು ಓದಿದ ವೈದ್ಯರು ಚಕಿತರಾಗಿದ್ದಾರೆ. ಕೂಡಲೆ ತಮ್ಮ ಖಾತೆ ಇರುವ ಬ್ಯಾಂಕ್’ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಆಗಲೆ ತಾವು ವಂಚನೆಗೊಳಗಾಗಿರುವುದು ಅವರ ಅರಿವಿಗೆ ಬಂದಿದ್ದು. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮೊಬೈಲ್ ಕಂಪನಿಗಳು, ಬ್ಯಾಂಕ್ ಸಿಬ್ಬಂದಿಗಳು ಸೇರಿದಂತೆ ನಾನಾ ನೆಪಗಳನ್ನು ಹೇಳಿಕೊಂಡು ವಂಚಕರು ಕರೆ ಮಾಡುತ್ತಿದ್ದಾರೆ. ಬ್ಯಾಂಕ್ ದಾಖಲೆಗಳು, ಒಟಿಪಿ ಕೋಡ್ ತಿಳಿದುಕೊಂಡು ಹಣ ಲಪಟಾಯಿಸುತ್ತಿದ್ದಾರೆ. ಮೊಬೈಲ್ ನಂಬರ್ ಬ್ಲಾಕ್ ಆಗುವ ಸಂಬಂಧ ಕರೆ ಮಾಡಿದರೆ ಸರ್ವಿಸ್ ಒದಗಿಸುವ ಅಧಿಕೃತ ಶೋರೂಂ ಅಥವಾ ಕಚೇರಿಗೆ ಭೇಟಿ ನೀಡುವುದು ಒಳಿತು. ಬ್ಯಾಂಕ್ ವಿಚಾರವಾಗಿ ಕರೆ ಬಂದರೆ ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸುವುದು ಸುರಕ್ಷಿತ.
ಅಚ್ಚುಕಟ್ಟಾದ ಮನೆಗೆ ಅಚ್ಚುಕಟ್ಟಾದ ಪೀಠೋಪಕರಣ. ಶಿವಮೊಗ್ಗದಲ್ಲಿ @HOME ಶೋರೂಂ. ಒಮ್ಮೆ ಭೇಟಿ ಕೊಡಿ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200