ಶಿವಮೊಗ್ಗ: ಜಿಯೋ ಏರ್‌ಫೈಬರ್ ಇಂಟರ್‌ನೆಟ್ ಕನೆಕ್ಷನ್ ಕಸ್ಟಮರ್ ಕೇರ್ ಸಿಬ್ಬಂದಿಯಂತೆ ನಟಿಸಿ ಆನ್‌ಲೈನ್ ವಂಚಕರು ನಿವೃತ್ತ ವ್ಯಕ್ತಿಯೊಬ್ಬರಿಗೆ ₹2,53,500 ವಂಚಿಸಿದ್ದಾರೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಶಿವಮೊಗ್ಗದ ನಿವೃತ್ತ ಉದ್ಯೋಗಿಯೊಬ್ಬರ ಮನೆಯ ಟಿವಿ ಸಂಪರ್ಕವು ಇದ್ದಕ್ಕಿದ್ದಂತೆ ಕಡಿತಗೊಂಡಿತ್ತು. ಹಾಗಾಗಿ ವಾಟ್ಸ್ಆ್ಯಪ್‌ನಲ್ಲಿ ಇದ್ದ ಕಸ್ಟಮರ್ ಕೇರ್ ಸೇವೆಗೆ ಕರೆ ಮಾಡಿದಾಗ, ಅಪರಿಚಿತ ವ್ಯಕ್ತಿಯು ಹಿಂದಿನ ರೀಚಾರ್ಜ್ ಬಿಲ್ ದಿನಾಂಕದ ವಿವರಣೆ ಕೇಳಿದ್ದಾರೆ. ತಾವು ಫೋನ್‌ಪೇ ಮೂಲಕ ಪಾವತಿಸಿರುವುದಾಗಿ ನಿವೃತ್ತ ಉದ್ಯೋಗಿ ತಿಳಿಸಿದಾಗ, ಆ ವ್ಯಕ್ತಿಯು ತಕ್ಷಣವೇ ಒಂದು APK ಆ್ಯಪ್ ಲಿಂಕ್ ವಾಟ್ಸ್ ಆ್ಯಪ್‌ಗೆ ಕಳುಹಿಸಿ, ಕ್ಲಿಕ್ ಮಾಡುವಂತೆ ಹೇಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಮೊಬೈಲ್ ಹ್ಯಾಕ್ ಆಗಿದೆ. ನಂತರ ವಂಚಕನು ಫೋನ್‌ಪೇ ತೆರೆಯುವಂತೆ ಹೇಳಿ, ಮೂರು ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿರುವ ಬ್ಯಾಲೆನ್ಸ್ ಪರಿಶೀಲಿಸಿದ್ದಾನೆ. ಈ ಮಾಹಿತಿ ಪಡೆದ ನಂತರ, ಅಪರಿಚಿತನು ಮೋಸದಿಂದ ಪ್ರಕಾಶ್ ಅವರ ಮೂರು ಬ್ಯಾಂಕ್ ಖಾತೆಗಳಿಂದ ಒಟ್ಟು ₹2,53,500 ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ » ‘ನಾನೇನು ಸನ್ಯಾಸಿಯಲ್ಲ, ಹೈಕಮಾಂಡ್ ಶೀಘ್ರ ನಿರ್ಧಾರ ಕೈಗೊಳ್ಳಲಿʼ
ಶಿವಮೊಗ್ಗದ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಂಚಕರನ್ನು ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





