ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 26 FEBRUARY 2024
SHIMOGA : ರಾತ್ರಿ ವೇಳೆ ಮಚ್ಚು, ಚಾಕು, ಖಾರದ ಪುಡಿ ಹಿಡಿದುಕೊಂಡು ಡಕಾಯಿತಿಗೆ ಸಂಚು ರೂಪಿಸಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು ಮೂವರು ಪರಾರಿಯಾಗಿದ್ದಾರೆ.
ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪುರದಾಳು ರಸ್ತೆಯಲ್ಲಿ ಐವರು ಯುವಕರು ದಾರಿಯಲ್ಲಿ ಹೋಗುವವರನ್ನು ತಡೆದು, ಡಕಾಯಿತಿಗೆ ಹೊಂಚು ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ರಾತ್ರಿ 11.30ರ ಹೊತ್ತಿಗೆ ಪುರದಾಳು ರಸ್ತೆಯಲ್ಲಿ ಗ್ಯಾಂಗ್ ಇದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಶಿಕಾರಿಪುರದ ಮೊಹಮ್ಮದ್ ಮುಸೇಬ್ (22) ಮತ್ತು ಶಿವಮೊಗ್ಗದ ತೌಸಿಫ್ (22) ಎಂಬುವವರು ಸಿಕ್ಕಿಬಿದ್ದಿದ್ದಾರೆ. ಇವರಿಂದ ಮಚ್ಚು, ಚಾಕು ಮತ್ತು 100 ಗ್ರಾಂ ಖಾರದ ಪುಡಿ ವಶಕ್ಕೆ ಪಡೆಯಲಾಗಿದೆ. ಇವರ ಗ್ಯಾಂಗ್ನಲ್ಲಿದ್ದ ಇನ್ನೂ ಮೂವರು ಪರಾರಿಯಾಗಿದ್ದಾರೆ.
ಪಿಎಸ್ಐ ನಾಗರಾಜ್, ಸಿಬ್ಬಂದಿ ನಾಗಪ್ಪ ಅಡಿವೆಪ್ಪನವರ್, ಹರೀಶ್ನಾಯ್ಕ, ಹರೀಶ್ ದಾಳಿಯಲ್ಲಿ ಭಾಗವಹಿಸಿದ್ದರು. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ‘ಷೇರು ವ್ಯವಹಾರದಲ್ಲಿ 200 ಪರ್ಸೆಂಟ್ ಲಾಭ’, ತಿಳಿಯಲು ಮುಂದಾದ ಮಹಿಳೆಗೆ ಕಾದಿತ್ತು ದೊಡ್ಡ ಆಘಾತ, ಏನದು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422