ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ನವೆಂಬರ್ 2021
ತೂರುಬಿಲ್ಲೆ ಜೂಜಾಟ ಆಡಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಾಲ್ವರನ್ನು ಬಂಧಿಸಲಾಗಿದ್ದು, ಅವರಿಂದ ಜೂಜಿಗೆ ತೊಡಗಿಸಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಗಾಜನೂರು ಗ್ರಾಮದ ದೊಡ್ಡ ಚಾನಲ್ ಹತ್ತಿರ ದಾಳಿ ನಡೆಸಲಾಗಿದೆ. ತೂರುಬಿಲ್ಲೆ ಆಟ ಆಡಿಸುತ್ತಿದ್ದ ಆರೋಪದ ಮೇಲೆ ಮೋಹನ್ (47), ದೀಪಕ್ (39), ಕೃಷ್ಣಪ್ಪ (64) ಮತ್ತು ಕುಮಾರ್ (21) ಎಂಬುವವರನ್ನು ಬಂಧಿಸಲಾಗಿದೆ.
ಹೇಗಾಯ್ತು ದಾಳಿ?
ದೊಡ್ಡ ಚಾನಲ್ ಬಳಿ ತೂರುಬಿಲ್ಲೆ ಜೂಜಾಟ ಆಡಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ತುಂಗಾ ನಗರ ಠಾಣೆ ಇನ್ಸ್ ಪೆಕ್ಟರ್ ದೀಪಕ್, ಎಎಸ್ಐ ನಾರಾಯಣ, ಸಿಬ್ಬಂದಿ ಅರುಣ್ ಕುಮಾರ್, ಚಂದ್ರಾನಾಯ್ಕ, ನಾಗರಾಜ್ ಅವರು ದಾಳಿ ನಡೆಸಿದರು.
ಪೊಲೀಸರನ್ನು ಕಂಡು ತೂರುಬಿಲ್ಲೆ ಆಟವಾಡುತ್ತಿದ್ದವರು ಪರಾರಿಯಾಗಿದ್ದಾರೆ. ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಂಧಿತರಿಂದ 27,042 ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು
















