ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 11 SEPTEMBER 2023
SHIMOGA : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ (Bus Stand) ಕಳ್ಳರ ಹಾವಳಿ ಮುಂದುವರೆದಿದೆ. ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ ಪರ್ಸ್ ಕಳ್ಳತನವಾಗಿರುವ (Purse theft) ಮತ್ತೊಂದು ಪ್ರಕರಣ ವರದಿಯಾಗಿದೆ.
ಶಿವಮೊಗ್ಗ ವಿದ್ಯಾನಗರದ ನಾಗರತ್ನಮ್ಮ ಎಂಬುವವರ ಪರ್ಸ ಕಳ್ಳತನವಾಗಿದೆ. ಮದುವೆ ಸಮಾರಂಭಕ್ಕೆ ತೆರಳಲು ದಾವಣಗೆರೆ ಬಸ್ ಹತುವ ಸಂದರ್ಭ ಘಟನೆ ಸಂಭವಿಸಿದೆ.
ಹೇಗಾಯ್ತು ಘಟನೆ?
ನಾಗರತ್ನಮ್ಮ ಬಸ್ ಹತ್ತುವಾಗ ರಶ್ ಇದ್ದಿದ್ದರಿಂದ ತಮ್ಮ ಬಳಿ ಇದ್ದ ಶಾಲ್ ತೆಗೆದು ಬಸ್ಸಿನ ಸೀಟಿಗೆ ಹಾಕಿದ್ದಾರೆ. ನಂತರ ಜನರ ಮಧ್ಯದಲ್ಲಿ ಬಸ್ ಹತ್ತಿ ಸೀಟಿನಲ್ಲಿ ಕುಳಿತಿದ್ದಾರೆ. ತಮ್ಮ ಸ್ನೇಹಿತೆಗಾಗಿ ಕಾದರು ಆಕೆ ಬರುವುದು ತಡವಾದ ಹಿನ್ನೆಲೆ ಬಸ್ಸಿನಿಂದ ಕೆಳಗಿಳಿದು ಪ್ಲಾಟ್‌ಫಾರಂನಲ್ಲಿ ಕುಳಿತಿದ್ದರು. ಈ ವೇಳೆ ಬ್ಯಾಗ್ ಪರಿಶೀಲಿಸಿದಾಗ ಪರ್ಸ್ ನಾಪತ್ತೆಯಾಗಿತ್ತು.
ಇದನ್ನೂ ಓದಿ – ಐರಾವತದಲ್ಲಿ ಶಿವಮೊಗ್ಗಕ್ಕೆ ಬಂದಿಳಿದ ದಂಪತಿಗೆ ಬಸ್ ನಿಲ್ದಾಣದಲ್ಲಿ ಕಾದಿತ್ತು ಶಾಕ್, ತಡವಾಗಿ ದೂರು ದಾಖಲು
ಚಿನ್ನಾಭರಣ ನಗದು ಮಿಸ್ಸಿಂಗ್
ನಾಗರತ್ನಮ್ಮ ಅವರ ಪರ್ಸಿನಲ್ಲಿ 2 ಸಾವಿರ ರೂ. ನಗದು 2.03 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇತ್ತು. ಎಲ್ಲೆಡೆ ಹುಡುಕಾಡಿದ ನಾಗರತ್ನಮ್ಮ ಕೊನೆಗೆ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದೇ ಮೊದಲಲ್ಲ
ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಬ್ಯಾಗಿನಿಂದ ಪರ್ಸ್ ಕಳ್ಳತನ ಇದೆ ಮೊದಲಲ್ಲ. ನಿಲ್ದಾಣದಲ್ಲಿ ಬಸ್ ಹತ್ತು ವೇಳೆ ಹೆಚ್ಚು ಜನ ಸಂದಣಿ ಇರುವಾಗ ನೂಕುನುಗ್ಗಲು ಉಂಟಾಗುತ್ತಾದೆ. ಈ ವೇಳೆ ಮಹಿಳೆಯರ ವ್ಯಾನಿಟಿ ಬ್ಯಾಗ್ ಅಥವಾ ಬ್ಯಾಗ್ ಜಿಪ್ ತೆಗೆದು ಪರ್ಸ್ ಕಳ್ಳತನ ಮಾಡಲಾಗುತ್ತಿದೆ.
ಇದನ್ನೂ ಓದಿ – KSRTC ಬಸ್ಸಿನಲ್ಲಿ ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ತೆಗೆದಾಗ ಮಹಿಳೆ, ಪತಿಗೆ ಕಾದಿತ್ತು ಶಾಕ್
ನಿಲ್ದಾಣದಲ್ಲಿ ಕಳ್ಳರ ಹಾವಳಿ ತಡೆಯಲು ಕೆಎಸ್‌ಆರ್‌ಟಿಸಿ ವತಿಯಿಂದ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆದರೂ ಪ್ರಯಾಣಿಕರ ಸೋಗಿನಲ್ಲಿ ಕಳ್ಳತನ ಮಾಡಲಾಗುತ್ತಿದೆ. ಇದರಿಂದ ಕಳ್ಳರು ಯಾರು ಪ್ರಯಾಣಿಕರು ಯಾರು ಅನ್ನುವುದ ಗೊತ್ತಾಗುತ್ತಿಲ್ಲ. ಬಸ್ ಹತ್ತುವ ಸಂದರ್ಭ ಜನರು ತಮ್ಮ ಬ್ಯಾಗ್ ಮತ್ತು ಅಮೂಲ್ಯ ವಸ್ತುಳ ಕುರಿತು ಹಚ್ಚು ನಿಗಾ ವಹಿಸಬೇಕು ಎಂದು ಮೈಕ್ ಮೂಲಕ ಸೂಚನೆ ನೀಡಲಾಗುತ್ತಿದೆ. ಜನರ ಸೀಟಿನ ಕಡೆಗೆ ಗಮನ ಕೊಟ್ಟಾಗ ಕಳ್ಳರು ಪ್ರಯಾಣಿಕರ ಬ್ಯಾಗ್ ಮತ್ತು ಅಮೂಲ್ಯ ವಸ್ತುಗಳ ಕಳ್ಳತನ ಮಾಡುತ್ತಿದ್ದಾರೆ.
LATEST NEWS
- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

About The Editor
ನಿತಿನ್ ಆರ್.ಕೈದೊಟ್ಲು





