ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಜುಲೈ 2019
ಶಿವಮೊಗ್ಗದ ಚಿನ್ನ, ಬೆಳ್ಳಿ ವ್ಯಾಪಾರಿ ಮೇಲೆ ಹಲ್ಲೆ ನಡಸಿ, ರಿವಲ್ವಾರ್ ತೋರಿಸಿ ಹಣ ದೋಚಲಾಗಿದೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಡಲಾಗಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
![]() |
ಗಂಧರ್ವ ನಗರ ನಿವಾಸಿ ಎಂ.ಕೆ.ಅನೀಸುರ್ ಇಸ್ಲಾಂ ಅವರ ಮೇಲೆ ಹಲ್ಲೆ ನಡೆಸಿ, ರಿವಾಲ್ವರ್ ತೋರಿಸಿ, ಹಣ ದೋಚಲಾಗಿದೆ. ಸಾದಿಕ್ ಅಲಿಯಾಸ್ ಸಾತು ಎಂಬಾತ ಕೃತ್ಯ ಎಸಗಿದವನು. ಗಾಂಧಿ ಬಜಾರ್’ನಲ್ಲಿರುವ ಅನೀಸುರ್ ಇಸ್ಲಾಂ ಅವರ ಚಿನ್ನ, ಬೆಳ್ಳಿ ಅಂಗಡಿಗೆ ಸಾದಿಕ್ ಪದೇ ಪದೇ ಬರುತ್ತಿದ್ದ. ಕೊಲೆ ಮಾಡುವ ಬೆದರಿಕೆ ಹಾಕಿ ಹಣ ಪಡೆಯುತ್ತಿದ್ದ.
ಬುಧವಾರ ಬೆಳಗ್ಗೆ ಅತೀಕ್ ಎಂಬಾತ ಅನೀಸುರ್ ಇಸ್ಲಾಂ ಅಂಗಡಿಗೆ ಬಂದು, ಸಾದೀಕ್ ಕರೆಯುತ್ತಿದ್ದಾನೆ ಎಂದು ಬೈಕ್’ನಲ್ಲಿ ಕರೆದೊಯ್ದಿದ್ದಾನೆ.
ಶೇಷಾದ್ರಿಪುರಂ ಗೂಡ್ಸ್ ಶೆಡ್ ಬಳಿ ಅನೀಸುರ್ ಅವರನ್ನು ಕರೆದೊಯ್ಯಲಾಗಿದೆ. ಅಲ್ಲಿಂದ ಸಾದಿಕ್, ದಾದಾಪೀರ್ ಮತ್ತಿತರರು ಬಲವಂತಾಗಿ ಕಾರಿನಲ್ಲಿ ಕೂರಿಸಿಕೊಂಡು ಹೊಳಲೂರು ಸಮೀಪ ಕರೆದೊಯ್ದಿದ್ದಾರೆ. ರಿವಲ್ವಾರ್ ತೋರಿಸಿ, ಮೂರು ಸಾವಿರ ರೂ. ಹಣ ಪಡೆದುಕೊಂಡಿದ್ದಾರೆ. ಇನ್ನೂ 50 ಸಾವಿರ ಹಣಕ್ಕೆ ಡಿಮಾಂಡ್ ಮಾಡಿದ್ದಾರೆ. ಈ ಸಂಬಂಧ ಅನೀಸುರ್ ಇಸ್ಲಾಂ ಕೋಟೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200