ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 13 ಮೇ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಗರದಲ್ಲಿ ಕಾರ್ಯಾಚರಿಸುತ್ತಿರುವ ರೌಡಿಗಳಿಗೆ ಶಿವಮೊಗ್ಗದ ಖಾಕಿ ಪಡೆ, ಇವತ್ತು ಸರಿಯಾಗಿ ಬಿಸಿ ಮುಟ್ಟಿಸಿದೆ. ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ ನೇತೃತ್ವದಲ್ಲಿ ನಡೆದ ರೌಡಿ ಪರೇಡ್’ನಲ್ಲಿ, ಖಡಕ್ ವಾರ್ನಿಂಗ್ ನೀಡಲಾಗಿದೆ.
ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಇವತ್ತು ರೌಡಿ ಪರೇಡ್ ನಡೆಯಿತು. ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ, ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಪರೇಡ್’ನಲ್ಲಿ ಪಾಲ್ಗೊಂಡಿದ್ದ ರೌಡಿಗಳಿಗೆ ವಾರ್ನಿಂಗ್ ನೀಡಿದರು.
300ಕ್ಕೂ ಹೆಚ್ಚು ರೌಡಿಗಳು ಭಾಗಿ
ಶಿವಮೊಗ್ಗ ನಗರದಲ್ಲಿ ಕಾರ್ಯಾಚರಿಸುತ್ತಿರುವ 300ಕ್ಕೂ ಹೆಚ್ಚು ರೌಡಿಗಳು, ಪರೇಡ್’ನಲ್ಲಿ ಪಾಲ್ಗೊಂಡಿದ್ದರು. ಸಿಟಿಯಲ್ಲಿರುವ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಗಳನ್ನು ಪ್ರತ್ಯೇಕವಾಗಿ ಪರೇಡ್’ನಲ್ಲಿ ನಿಲ್ಲಿಸಲಾಗಿತ್ತು. ಪ್ರತಿಯೊಬ್ಬರ ಬಳಿಗೂ ತೆರಳಿ ಮಾಹಿತಿ ಪಡೆದುಕೊಂಡ ಜಿಲ್ಲಾ ರಕ್ಷಣಾಧಿಕಾರಿ, ಮತ್ತೆ ಚಟುವಟಿಕೆ ಆರಂಭಿಸದಂತೆ ಎಚ್ಚರಿಸಿದರು. ಇನ್ನು, ರೌಡಿ ಪರೇಡ್’ಗೆ ಚಕ್ಕರ್ ಹಾಕಿದವರಿಗೆ, ಕೂಡಲೇ ಬಂದು ತಮ್ಮ ದಾಖಲಾತಿ ಒದಗಿಸುವಂತೆ ಸೂಚಿಸಿದ್ದಾರೆ. ಇಲ್ಲವಾದಲ್ಲಿ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.
ರಾತ್ರಿ ಬೇಗ ಮನೆಗೆ ಸೇರಿಕೊಳ್ಳಿ
ರಂಜಾನ್ ಹಬ್ಬವಿದೆ, ಗಣಪತಿ ಹಬ್ಬ ಕೂಡ ಬರಲಿದೆ. ಹಾಗಾಗಿ ಸಿಟಿಯಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯುವಂತಿಲ್ಲ. ರೌಡಿ ಲಿಸ್ಟ್’ನಲ್ಲಿರುವವರು ಸಾರ್ವಜನಿಕರಂತೆ ಯಾವಾಗ ಅಂದರೆ ಅವಾಗ ಹೊರಗೆ ಓಡಾಡುವಂತಿಲ್ಲ. ರಾತ್ರಿ 10.30ಕ್ಕೂ ಮೊದಲು ಇವರೆಲ್ಲ ಮನೆ ಸೇರಿಕೊಳ್ಳಬೇಕು. ಇನ್ನು, ಬೈಕ್’ನಲ್ಲಿ ಥ್ರಿಬಲ್ ರೈಡಿಂಗ್, ವೀಲಿಂಗ್ ಮಾಡುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ನೀವಿನ್ನು ಹೊರಡಿ, ಆದರೆ ಕೋಲಿನಲ್ಲಿ ಹೊಡೆಯಂಗಿಲ್ಲ
ರೌಡಿ ಪರೇಡ್’ನಲ್ಲಿ ಕೆಲವು ವಯಸ್ಸಾದವರು ಕೂಡ ಪಾಲ್ಗೊಂಡಿದ್ದರು. ಅವರ ವಿಚಾರಣೆ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ, ವೃದ್ಧರ ವಿರುದ್ಧ ಇರುವ ಪ್ರಕರಣಗಳ ಮಾಹಿತಿ ಪಡೆದರು. ಬಳಿಕ, ಪರೇಡ್’ನಿಂದ ತೆರಳಬಹುದು ಎಂದು ಕಳುಹಿಸಿದವರು. ಈ ವೇಳೆ, ವೃದ್ಧರೊಬ್ಬರು ಊರುಗೋಲು ಹಿಡಿದು ಬಂದಿದ್ದರು. ಇವರನ್ನು ಪರೇಡ್’ನಿಂದ ಕಳುಹಿಸುವಾಗ, ಕೋಲಿನಿಂದ ಯಾರ ಮೇಲೂ ಹಲ್ಲೆ ನಡೆಸುವಂತಿಲ್ಲ ಎಂದು ಜೋಕ್ ಮಾಡಿದರು.
ರೌಡಿ ಪರೇಡ್’ನಿಂದಾಗಿ ಶಿವಮೊಗ್ಗ ರೌಡಿಗಳಿಗೆ ಬಿಸಿ ಮುಟ್ಟಿದೆ. ಮುಂದಿನ ಕ್ರಮಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ರೌಡಿಗಳ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳು, ಮೊಬೈಲ್ ನಂಬರ್’ಗಳನ್ನು ಸಂಗ್ರಹಿಸಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]