SHIVAMOGGA LIVE NEWS | 20 FEBRURARY 2023
SHIMOGA : ಜಿಲ್ಲೆಯಾದ್ಯಂತ ಲಾಡ್ಜ್, ರೆಸಾರ್ಟ್ ಗಳಲ್ಲಿ (shimoga lodges) ಪೊಲೀಸರು ದಿಢೀರ್ ತಪಾಸಣೆ ಕೈಗೊಂಡಿದ್ದಾರೆ. ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಪಿಎಸ್ಐಗಳು, ಸಿಬ್ಬಂದಿ ಲಾಡ್ಜ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಏನೆಲ್ಲ ತಪಾಸಣೆ ಮಾಡಿದರು?
ಲಾಡ್ಜ್, ರೆಸಾರ್ಟ್ ಗಳಿಗೆ (shimoga lodges) ಆಗಮಿಸಿದ್ದ ಗ್ರಾಹಕರ ಕುರಿತು ಪೊಲೀಸರು ಮಾಹಿತಿ ಪಡೆದರು. 15 ದಿನದಿಂದ ಬಂದಿರುವ ಗ್ರಾಹಕರ ಕುರಿತು ರಿಜಿಸ್ಟರ್ ನಲ್ಲಿ ದಾಖಲಾಗಿರುವ ಕುರಿತು ಪರಿಶೀಲನೆ ನಡೆಸಿದರು. ಇನ್ನು, ಲಾಡ್ಜ್ ನಲ್ಲಿರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದರು. ಅವುಗಳ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಚೆಕ್ ಮಾಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಲಾಡ್ಜ್ ಮಾಲೀಕರಿಗೆ ಸೂಚನೆ
ಇನ್ನು, ಲಾಡ್ಜ್ ಮಾಲೀಕರು, ಸಿಬ್ಬಂದಿಗೆ ನಾಲ್ಕು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಸೂಚನೆ 1 : ಲಾಡ್ಜ್ ಗಳಲ್ಲಿ ಕಾರಿಡಾರ್ ಮತ್ತು ಲಾಡ್ಜ್ ನ ಮುಂಭಾಗ ರಸ್ತೆಗೆ ಮುಖ ಮಾಡಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು.
ಸೂಚನೆ 2 : ಲಾಡ್ಜ್ ಗಳಿಗೆ ಬರುವ ಗ್ರಾಹಕರ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆಯಬೇಕು. ಅದನ್ನು ರಿಜಿಸ್ಟರ್ ನಲ್ಲಿ ನಮೂದು ಮಾಡಬೇಕು. ವಿಳಾಸದ ಮಾಹಿತಿ ಇರುವ ಐಡಿ ಕಾರ್ಡ್ ಗಳ ಜೆರಾಕ್ಸ್ ಪ್ರತಿ ಪಡೆಯಬೇಕು. ಅದರಲ್ಲಿರುವ ವಿವರವನ್ನು ಪರಿಶೀಲಿಸಿ ಖಚಿತ ಪಡಿಸಿಕೊಳ್ಳಬೇಕು.
ಇದನ್ನೂ ಓದಿ – ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಬಳಿ ಬೈಕ್ ನಿಲ್ಲಿಸುವವರೆ ಹುಷಾರ್
ಸೂಚನೆ 3 : ಲಾಡ್ಜ್ ಗೆ ಬರುವ ಗ್ರಾಹಕರ ತಂಗುವ ಉದ್ದೇಶವನ್ನು ಕೇಳಿ ಪಡೆದು, ಖಚಿತ ಪಡಿಸಿಕೊಂಡು ಕಡ್ಡಾಯವಾಗಿ ರಿಜಿಸ್ಟರ್ ನಲ್ಲಿ ನೋಂದಾಯಿಸುವುದು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ಹೈಟೆಕ್ ಟರ್ಮಿನಲ್, ಒಳಗೆ ಹೇಗಿದೆ? ಏನೇನು ಸೌಲಭ್ಯವಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಸೂಚನೆ 4 : ಲಾಡ್ಜ್ ಗೆ ಬರುವ ಗ್ರಾಹಕರುಗಳ ಮೇಲೆ ಅನುಮಾನ ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ, ಪೊಲೀಸ್ ಕಂಟ್ರೋಲ್ ರೂಂ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿನೆ ನೀಡಲಾಗಿದೆ.