ಅಮೆರಿಕಾದಿಂದ ಬಂದ ಫೇಸ್‌ಬುಕ್‌ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಶಿವಮೊಗ್ಗದ ಯುವಕನಿಗೆ ಕಾದಿತ್ತು ಶಾಕ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 15 APRIL 2023

SHIMOGA : ನಾಲ್ಕೈದು ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ (Facebook) ಬಂದ ಫ್ರೆಂಡ್‍ ರಿಕ್ವೆಸ್ಟ್‌ (Friend Request) ಅಕ್ಸೆಪ್ಟ್‌ ಮಾಡಿದ ಶಿವಮೊಗ್ಗ ಜಿಲ್ಲೆಯ ಯುವಕನೊಬ್ಬ 3.60 ಲಕ್ಷ ರೂ. ಹಣ ಕಳೆದುಕೊಂಡಿದ್ದಾನೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

facebook logo

ಅಮೆರಿಕಾದಿಂದ ಬಂತು ರಿಕ್ವೆಸ್ಟ್‌

ಶಿವಮೊಗ್ಗದ ಯುವಕನ (ಹೆಸರು ಗೌಪ್ಯ) ಫೇಸ್‍ಬುಕ್‍ (Facebook)  ಖಾತೆಗೆ ನಾಲ್ಕೈದು ತಿಂಗಳ ಹಿಂದೆ ವಿಲ್ಲೀಸ್‍ ಮೈಕಲ್ ಎಂಬ ಹೆಸರಿನ ಫ್ರೆಂಡ್ ರಿಕ್ವೆಸ್ಟ್‍ ಬಂದಿದೆ. ಶಿವಮೊಗ್ಗದ ಯುವಕ ರಿಕ್ವೆಸ್ಟ್‌ ಅಕ್ಸೆಪ್ಟ್ ಮಾಡಿದ್ದಾನೆ. ಆಗ ವಿಲ್ಲೀಸ್ ಮೈಕಲ್ ತಾನು ಅಮೆರಿಕಾದವನು. ಅಲ್ಲಿ ಡಾಕ್ಟರ್ ಆಗಿದ್ದೇನೆ ಎಂದು ತಿಳಿಸಿದ್ದಾನೆ. ಬಳಿಕ ಶಿವಮೊಗ್ಗದ ಯುವಕನ ಮೊಬೈಲ್ ನಂಬರ್ ಪಡೆದು ವಾಟ್ಸಪ್‍ ಮೂಲಕ ನಿರಂತರ ಚಾಟಿಂಗ್ ಮಾಡಿ, ವಿಶ್ವಾಸ ಗಿಟ್ಟಿಸಿಕೊಂಡಿದ್ದಾನೆ.

ಇದನ್ನೂ ಓದಿ – ಎರಡು ದಿನ ರಜೆ ಕಳೆದು ಮನೆಯ ಪಕ್ಕದ ರಸ್ತೆಗೆ ಬಂದ ಬ್ಯಾಂಕ್ ಉದ್ಯೋಗಿಗೆ ಕಾದಿತ್ತು ಶಾಕ್

‘ಅಮೆರಿಕನ್ ಡಾಲರ್ ಕೊಡುತ್ತೇನೆ’

ತಾನು ಭಾರತಕ್ಕೆ ಬಂದಾಗ ಅಮೆರಿಕನ್ ಡಾಲರ್‍ ತಂದು ಕೊಡುತ್ತೇನೆ ಎಂದು ಶಿವಮೊಗ್ಗದ ಯುವಕನಿಗೆ ವಿಲ್ಲೀಸ್‍ ಮೈಕಲ್ ತಿಳಿಸಿದ್ದ. ಅದರಂತೆ ಭಾರತಕ್ಕೆ ಬಂದಿದ್ದು, ಅಮೆರಿಕನ್ ಡಾಲರ್‌ಗಳನ್ನು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಟ್ಯಾಕ್ಸ್ ಹಾಗೂ ಇತರೆ ಚಾರ್ಜ್‍ ಕಟ್ಟಿದರಷ್ಟೆ ಡಾಲರ್‌ಗಳನ್ನು ಬಿಡುವುದಾಗಿ ಹೇಳುತ್ತಿದ್ದಾರೆ ಎಂದು ಶಿವಮೊಗ್ಗದ ಯುವಕನನ್ನು ನಂಬಿಸಿದ್ದಾನೆ. ಇದಕ್ಕಾಗಿ ಏ.7 ರಿಂದ ಏ.10ರವರಗೆ ಶಿವಮೊಗ್ಗದ ಯುವಕನಿಂದ ವಿವಿಧ ಸಮಯದಲ್ಲಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.

ಇದನ್ನೂ ಓದಿ – ಲಾರಿಯಲ್ಲಿ ಸಾಗಿಸಲಾಗುತ್ತಿತ್ತು 46 ಬೈಕ್, ಯಾವುದಕ್ಕೂ ಇರಲಿಲ್ಲ ಡಾಕ್ಯೂಮೆಂಟ್

ಲಕ್ಷ ಲಕ್ಷ ರೂ. ವಂಚನೆ

ಡಾಲರ್‌ ಆಸೆಗೆ ಬಿದ್ದು ಶಿವಮೊಗ್ಗದ ಯುವಕ ಡಾ.ವಿಲ್ಲೀಸ್ ಮೈಕಲ್‍ ಎಂಬಾತ ಸೂಚಿಸಿದ ಖಾತೆಗೆ 3.60 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾನೆ. ಆ ಬಳಿಕ ವಿಲ್ಲೀಸ್ ಮೈಕಲ್‍ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ತಾನು ವಂಚನೆಗೊಳಗಾಗಿರುವುದು ಶಿವಮೊಗ್ಗದ ಯುವಕನಿಗೆ ಅರಿವಾಗಿದೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

shivamogga live news whatsappa number

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment