ಶಿವಮೊಗ್ಗದ ಉದ್ಯಮಿ ತಲೆಗೆ ರಿವಾಲ್ವರ್ ಇಟ್ಟು ಹತ್ಯೆ ಬೆದರಿಕೆ, ಕೆಲವೇ ಗಂಟೆಯಲ್ಲಿ ಸುಪಾರಿ ಹಂತಕರು ಅರೆಸ್ಟ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಜುಲೈ 2019

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ರಿಯಲ್ ಎಸ್ಟೇಟ್ ಉದ್ಯಮಿ ಎದೆಗೆ ರಿವಾಲ್ವರ್ ಇಟ್ಟು, ಹತ್ಯೆ ಮಾಡುವ ಬೆದರಿಕೆ ಒಡ್ಡಿದ್ದ ಪ್ರಕರಣ ಸಂಬಂಧ, ಶಿವಮೊಗ್ಗ ಪೊಲಿಸರು ಐದು ಜನರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ರಿವಾಲ್ವರ್ ಮತ್ತು ಒಂದು ಗುಂಡು ವಶಕ್ಕೆ ಪಡೆಯಲಾಗಿದೆ.

ಉದ್ಯಮಿ ಹೆವನ್ ಇನ್ ಹಬೀಬ್ ಹತ್ಯೆ ಮಾಡಲು, ಐವರು ಸುಪಾರಿ ಕಿಲ್ಲರ್’ಗಳು ಸಂಚು ರೂಪಿಸಿದ್ದರು. ಜುಲೈ 16ರಂದು ರಾತ್ರಿ ಚಾಲುಕ್ಯ ನಗರದ ಬಳಿ, ಹಬೀಬ್ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ರಿವಾಲ್ವರ್ ತಲೆಗಿಟ್ಟು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಹಬೀಬ್ ಹತ್ಯೆಗೆ ಸುಪಾರಿ ಕೊಟ್ಟಿದ್ಯಾರು?

67576000 885392555155499 6550450155810717696 n.jpg? nc cat=108& nc oc=AQmxcD41Daz9nZ 7AwIrcQTSx3lBu20vcUvom0vbafHXO8jbGRcqTLsBs15gl6axghA& nc ht=scontent.fblr11 1
ಹೆವನ್ ಇನ್ ಹಬೀಬ್

ಉದ್ಯಮಿ ಹೆವನ್ ಇನ್ ಹಬೀಬ್ ಹತ್ಯೆಗೆ ಕಲೀಂವುಲ್ಲಾ ಎಂಬಾತ ಸುಪಾರಿ ನೀಡಿದ್ದ. ‘ಹಬೀಬ್ ಮತ್ತು ಕಲೀಂವುಲ್ಲಾ ಒಟ್ಟಿಗೆ ವ್ಯವಹಾರ ನಡೆಸುತ್ತಿದ್ದರು. ಹಣಕಾಸು ವಿಚಾರವಾಗಿ ಇಬ್ಬರ ನಡುವೆ ತಕರಾರು ಉಂಟಾಗಿತ್ತು. ಇದೇ ವಿವಾದ ಸಂಬಂಧ, ಹಬೀಬ್ ಹತ್ಯಗೆ ಕಲೀಂವುಲ್ಲಾ ಸುಪಾರಿ ನೀಡಿದ್ದ’  ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ ತಿಳಿಸಿದ್ದಾರೆ.

67166318 885608555133899 8424406831585034240 n.jpg? nc cat=106& nc oc=AQnVURqh8 CONY9lMBwyGGA8D ahLxzmIlkphXpshpzaw8pGq249BQDAnZSC Z8pmKA& nc ht=scontent.fblr11 1

ಸುಪಾರಿ ಪಡೆದವರು ಅರೆಸ್ಟ್

ಹಬೀಬ್ ಹತ್ಯಗೆ ಸಾತು ಮತ್ತು ಗ್ಯಾಂಗ್’ಗೆ ಕಲೀಂವುಲ್ಲಾ ಸುಪಾರಿ ನೀಡಿದ್ದ. ಆದರೆ ಹಬೀಬ್ ಅವರ ಹತ್ಯೆಗೆ ವಿಫಲ ಯತ್ನ ನಡೆಸಲಾಗಿತ್ತು. ಈ ಸಂಬಂಧ ಉದ್ಯಮಿ ಹಬೀಬ್ ದೂರು ನೀಡಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಐವರನ್ನು ಬಂಧಿಸಿದ್ದಾರೆ.

67091913 885608548467233 6204509485218660352 n.jpg? nc cat=101& nc oc=AQn2f9thY MEgMtK1 J987tbwuB8RkU3e0LeaaeI51iNfFUYyAHK3GBtswipQFK9dHQ& nc ht=scontent.fblr11 1

ಸಾಧಿಕ್ ಅಲಿಯಾಸ್ ಸಾತು, ಶಿವಮೊಗ್ಗದ ಅತೀಕ್, ಬಳ್ಳಾರಿಯ ದಾದಾಪೀರ್, ಮುಂಬೈನ ಆಂಜೋಲಾ ಫರ್ನಾಂಡೀಸ್, ಮಂಡ್ಯದ ಕುಮಾರ್ ಗೌಡ ಬಂಧಿತರು.

Tunga Nagara Police Station 1 1

ಇದೇ ಆರೋಪಿಗಳು ಜುಲೈ 17ರಂದು ಗಾಂಧಿ ಬಜಾರ್’ನ ಚಿನ್ನದ ಅಂಗಡಿ ಮಾಲೀಕನನ್ನು ಕಿಡ್ನಾಪ್ ಮಾಡಿ, ಆತನಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಡಿಸಿಬಿ, ಸಿಇಎನ್, ತುಂಗಾನಗರ ಮತ್ತು ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇನ್ನು, ಈ ಪ್ರಕರಣ ಸಂಬಂಧ ತುಂಗಾ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment