ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 MAY 2024
SHIMOGA : ಬಾರ್ ಒಂದರಲ್ಲಿ ಮೊಸರಿನ ವಿಚಾರವಾಗಿ ಗ್ರಾಹಕ ಮತ್ತು ಸಪ್ಲಯರ್‌ಗಳ (SUPPLIERS) ಮಧ್ಯೆ ಗಲಾಟೆಯಾಗಿ, ಕೈ ಕೈ ಮಿಲಾಯಿಸಿದ್ದಾರೆ. ಗ್ರಾಹಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾರ್ಡನ್ ಏರಿಯಾದ ಬಾರ್ ಒಂದರಲ್ಲಿ ಘಟನೆ ನಡೆದಿದೆ. ಕಾಶಿಪುರದ ಮುರುಡೇಶ್ವರ ಎಂಬುವವರು ಬಾರ್‌ನಲ್ಲಿ ಮದ್ಯ ಸೇವಿಸಿದ್ದರು. ರಾತ್ರಿ 10.30ಕ್ಕೆ ಹೊರಡುವ ಮುನ್ನ ಮೊಸರು ಬೇಕು ಎಂದು ಮುರುಡೇಶ್ವರ ಆರ್ಡರ್ ಮಾಡಿದ್ದರು. ಸ್ವಲ್ಪ ಹೊತ್ತಿನ ಬಳಿಕ ಹಿಂತಿರುಗಿದ ವೇಯ್ಟರ್ ಅಡುಗೆ ಮನೆ ಬಂದ್ ಆಗಿದೆ. ಮೊಸರು ಸಿಗುವುದಿಲ್ಲ ಎಂದು ತಿಳಿಸಿದ್ದಾರೆ. ಇಷ್ಟು ಹೊತ್ತು ಕಾಯಿಸಿದ್ದೇಕೆ ಎಂದು ಮುರುಡೇಶ್ವರ ಪ್ರಶ್ನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ – ಫೋಟೊಗ್ರಾಫರ್ ದುರ್ಮರಣ, ಬೈಕ್‌ಗಳ ಅಪಘಾತದಲ್ಲಿ ಒಬ್ಬ ಸಾವು, ಮತ್ತೊಬ್ಬರ ಗಂಭೀರ
ಈ ವೇಳೆ ಗ್ರಾಹಕ ಮುರುಡೇಶ್ವರ ಮತ್ತು ವೇಯ್ಟರ್ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಬಾರ್‌ನ ಐದಾರು ವೇಯ್ಟರ್‌ಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422