SHIVAMOGGA LIVE NEWS | 29 JUNE 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
SHIMOGA : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ (bus) ಮಹಿಳೆಯೊಬ್ಬರ ಗಮನ ಬೇರೆಡೆ ಸೆಳೆದು ಚಿನ್ನಾಭರಣ, ನಗದು, ಎಟಿಎಂ ಕಾರ್ಡ್‌ಗಳಿರುವ ಪರ್ಸ್ ಕಳ್ಳತನ ಮಾಡಲಾಗಿದೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಮಹಿಳೆಯರು ವಿರುದ್ಧ ಪ್ರಕರಣ ದಾಖಲಾಗಿದೆ.
‘ಕಾಯಿನ್ ಬಿದ್ದಿದೆ ತೆಗೆದು ಕೊಡಿ’
ಶಿವಮೊಗ್ಗದ ಶೋಭಾ ಕುಮಾರಿ ಅವರು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಚಿತ್ರದುರ್ಗಕ್ಕೆ ತೆರಳುತ್ತಿದ್ದರು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಮಹಿಳೆಯರ ಪೈಕಿ ಒಬ್ಬಾಕೆ, ‘ಕಾಯಿನ್‌ಗಳು ಕೆಳಗೆ ಬಿದ್ದಿವೆ ತೆಗೆದುಕೊಡಿ’ ಎಂದು ಶೋಭಾ ಕುಮಾರಿಗೆ ಅವರಿಗೆ ಮನವಿ ಮಾಡಿದ್ದರು. ಚಿತ್ರದುರ್ಗ ತಲುಪಿದ್ದ ಶೋಭಾ ಕುಮಾರಿ ಅವರು ತಮ್ಮ ತಂದೆಯೊಂದಿಗೆ ಮೈಸೂರಿನಲ್ಲಿ ನಡೆಯುತ್ತಿದ್ದ ಸಂಬಂಧಿಯ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು.
ಬ್ಯಾಗ್ ತೆಗೆದಾಗ ಕಾದಿತ್ತು ಆಘಾತ
ಮದುವೆ ಸಮಾರಂಭಕ್ಕೆ ತೆರಳಲು ಬ್ಯಾಗ್ ತೆಗೆದಾಗ ಚಿನ್ನಾಭರಣ, ನಗದು ಇಟ್ಟಿದ್ದ ಪರ್ಸ್ ಇರಲಿಲ್ಲ. ಮದುವೆ ಮುಗಿಸಿ ಶಿವಮೊಗ್ಗದ ಮನೆಗೆ ಬಂದು ಹುಡುಕಿದಾಗ ಪರ್ಸ್ ಇರಲಿಲ್ಲ. ಬಸ್ಸಿನಲ್ಲಿ ತಮ್ಮ ಗಮನ ಬೇರೆಡೆ ಸೆಳೆದು ಬಸ್ಸಿನಲ್ಲಿ ತಮ್ಮ ಬ್ಯಾಗ್‌ನ ಜಿಪ್ ತೆಗೆದು ಪರ್ಸ್ ಕಳವು ಮಾಡಲಾಗಿದೆ ಎಂದು ಆರೋಪಿಸಿ ಶೋಭಾ ಕುಮಾರಿ ಅವರು ದೂರು ನೀಡಿದ್ದಾರೆ.
ಪರ್ಸ್‌ನಲ್ಲಿ 3.05 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1500 ರೂ. ನಗದು, ಎರಡು ಎಟಿಎಂ ಕಾರ್ಡುಗಳು ಇದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಿಂದ ಕೆಲಸಕ್ಕೆಂದು ಆಫ್ರಿಕಾಗೆ ಹೋಗಿದ್ದ, ಭಾರತಕ್ಕೆ ಹಿಂತಿರುಗಿ 7 ವರ್ಷವಾದರೂ ಮನೆಗೆ ಬಾರದ ವ್ಯಕ್ತಿ
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






