ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 5 DECEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಎಟಿಎಂ ಮೆಷಿನ್ನಿಂದ ಹಣ ಹೊರ ಬರುವ ಹೊತ್ತಿಗೆ ಅಡ್ಡಿಪಡಿಸಿ ಫೇಲ್ಡ್ ಟ್ರಾನ್ಸಾಕ್ಷನ್ ಎಂದು ತೋರಿಸಿ ಬ್ಯಾಂಕಿಗೆ ವಂಚಿಸಲಾಗಿದೆ. ವಿದ್ಯಾನಗರದಲ್ಲಿರುವ ಎಟಿಎಂ ಕೇಂದ್ರದಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ಪ್ರಕರಣ?
ಡೆಬಿಟ್ ಕಾರ್ಡ್ ಬಳಸಿ ಎಟಿಎಂನಲ್ಲಿ ಹಣ ಡ್ರಾ ಮಾಡಲಾಗಿದೆ. ಎಟಿಎಂ ಯಂತ್ರವು ಹಣ ನೀಡಲು ತೆರದುಕೊಳ್ಳುವ ಹೊತ್ತಿಗೆ ಅದು ಸರಾಗವಾಗಿ ಕೆಲಸ ನಿರ್ವಹಿಸಲು ಅಡ್ಡಿಪಡಿಸಲಾಗಿದೆ. ಆದರೆ ಹಣ ಹೊರ ಬಂದಿದ್ದು ಅದನ್ನು ಪಡೆಯಲಾಗಿದೆ.
ಇದನ್ನೂ ಓದಿ –ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಅಪಘಾತ, ತಪ್ಪಿತು ದೊಡ್ಡ ಅನಾಹುತ, ಕಾರಿನ ಮುಂಭಾಗ ಜಖಂ
ಸರಾಗ ಕಲಸಕ್ಕೆ ಅಡ್ಡಿಪಡಿಸಿದ್ದರಿಂದ ಎಟಿಎಂನಲ್ಲಿ ಫೇಲ್ಡ್ ಟ್ರಾನ್ಸಾಕ್ಷನ್ ಎಂದು ತೋರಿಸಿದೆ. ಇದನ್ನು ಆಧಾರವಾಗಿ ಇಟ್ಟುಕೊಂಡು ಎಟಿಎಂನಿಂದ ಹಣ ಬಂದಿಲ್ಲ ಎಂದು ಬ್ಯಾಂಕ್ಗೆ ಆನ್ಲೈನ್ ಮೂಲಕ ದೂರು ನೀಡಲಾಗಿದೆ. ಈ ರೀತಿ ದುಷ್ಕೃತ್ಯ ಎಸಗಿ ಬ್ಯಾಂಕ್ನಿಂದ 2.70 ಲಕ್ಷ ರೂ. ಹಣವನ್ನು ಪುನಃ ದುಷ್ಕರ್ಮಿಗಳು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾರೆ. 2022ರ ಜುಲೈ 16 ರಿಂದ ಸೆಪ್ಟೆಂಬರ್ 18ರವರೆಗೆ ಇಂತಹ ಘಟನೆ ನಡೆದಿದೆ.
ಬ್ಯಾಂಕ್ಗೆ ವಂಚಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI Bank) ಮ್ಯಾನೇಜರ್ ಕೋಟೆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.