ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಗರದ ಶಕ್ತಿಧಾಮ ಲೇಔಟ್ನಲ್ಲಿ ನಿರ್ಮಾಣ ಹಂತದ ಮನೆಯೊಂದರಲ್ಲಿ ಸುಮಾರು ₹2.50 ಲಕ್ಷ ಮೌಲ್ಯದ ವಿದ್ಯುತ್ ವಯರ್ಗಳನ್ನು (electrical wires) ಕಳ್ಳತನ ಮಾಡಲಾಗಿದೆ.
ಪ್ರಾಧ್ಯಾಪಕ ರಾಕೇಶ್ ಅವರು ಶಕ್ತಿಧಾಮ ಲೇಔಟ್ನಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ವಿದ್ಯುತ್ ವಯರ್ ಅಳವಡಿಸುವ ಕೆಲಸ ಪೂರ್ಣಗೊಂಡಿತ್ತು. ಕೆಲಸಗಾರರು ಹೋದ ನಂತರ ರಾಕೇಶ್ ಅವರು ಮನೆಗೆ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಿಗ್ಗೆ 6 ಗಂಟೆಗೆ ಬಂದು ನೋಡಿದಾಗ ಕಟಿಂಗ್ ಮೆಷಿನ್ ವೈಯರ್ ಕಟ್ ಆಗಿರುವುದು ಕಂಡುಬಂದಿದೆ. ನಂತರ ಎಲೆಕ್ಟ್ರೀಷಿಯನ್ ಬಂದು ಪರಿಶೀಲಿಸಿದಾಗ, ಮನೆಯ ಸೀಲಿಂಗ್ ಮತ್ತು ಇತರ ಭಾಗಗಳಿಗೆ ಅಳವಡಿಸಿದ್ದ ಎಲ್ಲಾ ವಿದ್ಯುತ್ ವೈಯರ್ಗಳನ್ನು ಕಳ್ಳತನ ಮಾಡಿರುವುದು ಗೊತ್ತಾಗಿದೆ.

ಇದನ್ನೂ ಓದಿ – ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್ ಇನ್ಸ್ಪೆಕ್ಟರ್ ಸಚಿನ್ ಅಂತ್ಯಕ್ರಿಯೆ
ಅನುಮಾನಗೊಂಡ ರಾಕೇಶ್ ಅವರು ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ, ಮಾರ್ಚ್ 6ರ ರಾತ್ರಿ ಸುಮಾರು 11:15ರ ಹೊತ್ತಿಗೆ ಇಬ್ಬರು ಕಳ್ಳರು ಮೆಟ್ಟಿಲುಗಳ ಮೂಲಕ ಮನೆಯೊಳಗೆ ನುಗ್ಗಿ ಕೃತ್ಯ ಎಸಗಿರುವುದು ಕಂಡುಬಂದಿದೆ. ಸುಮಾರು ₹2.50 ಲಕ್ಷ ಮೌಲ್ಯದ ವೀಗಾರ್ಡ್ ಕಂಪೆನಿಯ ವಯರ್ಗಳನ್ನು ಹೊತ್ತೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಬೆಳಗ್ಗೆ ಲೇಔಟ್ಗೆ ಬಂದ ಲೆಕ್ಚರರ್ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು














