ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2020
ನಕ್ಷತ್ರ ಆಮೆ ಮಾರಾಟಕ್ಕೆ ಪ್ರಯತ್ನಿಸಿದ ನಾಲ್ಕು ಮಂದಿಯನ್ನು ಶಿವಮೊಗ್ಗದ ಅರಣ್ಯ ಇಲಾಖೆ ಸಿಬ್ಬಂದಿ ಅರೆಸ್ಟ್ ಮಾಡಿದ್ದಾರೆ. ಇವರು ಆಮೆ ಮಾರಾಟಕ್ಕೆ ಆಂಧ್ರ ಪ್ರದೇಶದಿಂದ ಶಿವಮೊಗ್ಗಕ್ಕೆ ಬಂದಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
50 ಲಕ್ಷಕ್ಕೆ ಡೀಲ್
ನಕ್ಷತ್ರ ಆಮೆ ಮಾರಾಟಕ್ಕೆ ಡೀಲ್ ರೆಡಿಯಾಗಿದ್ದು. ಸುಮಾರು 50 ಲಕ್ಷ ರುಪಾಯಿಗೆ ಆಮೆಯ ಮಾರಾಟಕ್ಕೆ ಯೋಜಿಸಲಾಗಿತ್ತು. ಆದರೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಪುರದಾಳು – ಗಾಡಿಕೊಪ್ಪ ರಸ್ತೆಯಲ್ಲಿ ಇವರನ್ನು ಬಂಧಿಸಲಾಗಿದೆ.
ಅಂಧ್ರದಿಂದ ಬಂದಿದ್ದರು
ಆಂದ್ರಪ್ರದೇಶದ ಅನಂತಪುರಂ ಮೂಲದ ಯರ್ರಿ ಸ್ವಾಮಿ, ಶಬ್ಬೀರ ಬಾಷಾ, ರಾಯಚೂರಿನ ಮುರಳೀದರ್, ಚಿತ್ರದುರ್ಗದ ಪದ್ಮಾವತಿ ಎಂಬುವವರನ್ನು ಬಂಧಿಸಲಾಗಿದೆ. ಅನಂತಪುರಂನಿಂದಲೇ ಆಮೆಯನ್ನು ತರಲಾಗಿತ್ತು. ಆದರೆ ಶಿವಮೊಗ್ಗದಲ್ಲಿ ಅದನ್ನು ಖರೀದಿಸಿಲು ಮುಂದಾದವರು ಯಾರು ಅನ್ನುವುದು ಇನ್ನೂ ತಿಳಿದು ಬಂದಿಲ್ಲ.
ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಪ್ರದೀಪ್ ಹಾಲಭಾವಿ, ಸಾಗರ ಅರಣ್ಯ ಸಂಚಾರಿ ದಳದ ಎಸ್ಐ ಮಲ್ಲಿಕಾರ್ಜುನ ಬಿ, DRFO ಅಂತೋಣಿ ರೇಗೊ, ಕೃಪಸಾಗರ್.ಸಿ, ಅರಣ್ಯ ರಕ್ಷಕರಾದ ಸಲೀಮ್, ರಮೇಶ್, ರಂಜಿತಾ, ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಗಳಾದ ರಂಗನಾಥ್, ಗಣೇಶ್.ಬಿ, ರತ್ನಾಕರ್ ವಿಶ್ವನಾಥ್.ಕೆ, ಪುಷ್ಪಾ, ಫಿಲೋಮಿನಾ ಸಿಕ್ವೇರಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]