ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 17 MARCH 2021
ಸಾಗರ ರಸ್ತೆಯಲ್ಲಿ ತುಂಗಾ ಚಾನಲ್ಗೆ ಬಿದ್ದ ವ್ಯಕ್ತಿಗೆ ಚಿಕಿತ್ಸೆ ಮುಂದುವರೆದಿದ್ದು, ಚೇತರಿಕೆ ಕಾಣುತ್ತಿದ್ದಾರೆ. ಪೊಲೀಸರ ವಿಚಾರಣೆ ವೇಳೆ 80 ಅಡಿ ಆಳಕ್ಕೆ ಬೀಳಲು ಕಾರಣವೇನು ಎಂದು ತಿಳಿಸಿದ್ದಾರೆ.
ಸಾಗರ ತಾಲೂಕು ನೀಚಡಿ ನಿವಸಿ ಸಂತೋಷ್ (45) ಸೋಮವಾರ ರಾತ್ರಿ, ಸಾಗರ ರಸ್ತೆಯ ತುಂಗಾ ಚಾನಲ್‍ನಗೆ ಬಿದ್ದಿದ್ದರು. ನಡುರಾತ್ರಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಸಂತೋಷ್ ಅವರ ರಕ್ಷಣೆ ಮಾಡಿತ್ತು.
ಇದನ್ನೂ ಓದಿ | ಗಾಡಿಕೊಪ್ಪ ಬಳಿ ತುಂಗಾ ಚಾನಲ್ಗೆ ಬಿದ್ದ ಸಾಗರದ ವ್ಯಕ್ತಿ, ನಡು ರಾತ್ರಿ 80 ಅಡಿಯಿಂದ ರಕ್ಷಣೆ
ಈ ಸಂಬಂಧ ತುಂಗಾ ನಗರ ಠಾಣೆ ಪೊಲೀಸರು ಸಂತೋಷ್ ಅವರಿಂದ ಹೇಳಿಕೆ ಪಡೆದಿದ್ದು, ಘಟನೆ ಸಂಬಂಧ ಪೂರ್ಣ ಮಾಹಿತಿ ಲಭ್ಯವಾಗಿದೆ.
ಸಂತೋಷ್ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸಿದ್ದರು. ರಾತ್ರಿ ಸಾಗರಕ್ಕೆ ಮರಳುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಮೂತ್ರ ವಿಸರ್ಜನೆಗಾಗಿ ತುಂಗಾ ಚಾನಲ್ ಬಳಿಗೆ ತೆರಳಿದ್ದಾರೆ. ಈ ವೇಳೆ ಕಾಲು ಜಾರಿ 80 ಅಡಿ ಆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಸಂತೋಷ್ ಅವರ ಕಾಲು, ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ದೇಹದ ವಿವಿಧೆಡೆ ಗಾಯವಾಗಿದೆ.
ಚಾನಲ್‍ಗೆ ಬೀಳುತ್ತಿದ್ದಂತೆ ಸಂತೋಷ್ ಅವರೆ ತಮ್ಮ ಮೊಬೈಲ್‍ನಿಂದ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ಘಟನೆಯನ್ನು ವಿವರಿಸಿದ್ದಾರೆ. ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಸಂತೋಷ್ ಅವರ ರಕ್ಷಣೆ ಮಾಡಿದ್ದಾರೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್.ಅಶೋಕ್ ಕುಮಾರ್, ಸಿಬ್ಬಂದಿಗಳಾದ ನಾಗರಾಜಪ್ಪ, ವಿನಯ್, ಯೋಗೇಶ್, ಸತೀಶ್, ರಮೇಶ್, ಶಾಂತರಾಜು ಮತ್ತು ತುಂಗಾ ನಗರ ಠಾಣೆ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422