ಆನಂದಪುರ ಸಮೀಪ ಅರಣ್ಯ ಸಂಚಾರಿ ದಳ ದಾಳಿ, ಎರಡು ಚೀಲ ಹಿಡಿದಿದ್ದವನು ಅರೆಸ್ಟ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 28 ಫೆಬ್ರವರಿ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಕೃಷ್ಣ ಮೃಗದ ಚರ್ಮಗಳನ್ನು ಮಾರಾಟ ಮಾಡಲು ಬಂದಿದ್ದವರ ಮೇಲೆ ಅರಣ್ಯ ಸಂಚಾರಿ ದಳ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು, ಕೃಷ್ಣ ಮೃಗಗಳ ಎರಡು ಚರ್ಮಗಳನ್ನು ವಶಕ್ಕೆ ಪಡೆಯಲಾಗಿದೆ.

Shimoga Nanajappa Hospital Cancer Care Center

ಶಿಕಾರಿಪುರ ತಾಲೂಕು ಚಿಕ್ಕಮರಡಿ ತಾಂಡಾದ ಡಿಕ್ಯಾನಾಯ್ಕ (35) ಬಂಧಿತ. ಆನಂದಪುರ ಸಮೀಪದ ದಾಸಕೊಪ್ಪ ಬಸ್ ನಿಲ್ದಾಣದ ಬಳಿ ದಾಳಿ ನಡೆಸಲಾಗಿದೆ.

ಹೇಗಾಯ್ತು ಘಟನೆ?

ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಾಳ ಪೊಲೀಸರು ದಾಸಕೊಪ್ಪ ಬಸ್ ನಿಲ್ದಾಣದ ಬಳಿ ದಾಳಿ ನಡೆಸಿದ್ದಾರೆ. ಎರಡು ಚೀಲಗಳನ್ನು ಹಿಡಿದು ನಿಂತುಕೊಂಡಿದ್ದ ಇಬ್ಬರು, ಪೊಲೀಸರನ್ನು ಕಂಡ ಕೂಡಲೆ ಪರಾರಿಯಾಗಲು ಯತ್ನಿಸಿದ್ದಾರೆ.

ಬೆನ್ನಟ್ಟಿದ ಪೊಲೀಸರು ಡಿಕ್ಯಾನಾಯ್ಕನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಚೀಲಗಳನ್ನು ಪರಿಶೀಲನೆ ನಡೆಸಿದಾಗ ಕೃಷ್ಣಮೃಗದ ಎರಡು ಚರ್ಮಗಳನ್ನು ಸಿಕ್ಕಿವೆ. ಡಿಕ್ಯಾನಾಯ್ಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಮತ್ತೊಬ್ಬನಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.

ಜಿ.ಮಲ್ಲಿಕಾರ್ಜುನ್, ಗಣೇಶ್, ಗಿರೀಶ್, ವಿಶ್ವನಾಥ್, ಕೃಷ್ಣ, ದಿನೇಶ್, ಚೈತ್ರಾ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ| ಬೈಕ್ ಸೀಟ್ ಕೆಳಗೆ ಬುಸುಗುಡುತ್ತಿತ್ತು ನಾಗರಹಾವು

Shimoga Live Age Wise Reach

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment