ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 JANUARY 2024
SHIMOGA : ಬೈಕ್ ವೀಲಿಂಗ್ ಮಾಡಿದವರಿಗೆ ಸಂಚಾರ ಪೊಲೀಸರು ಪುನಃ ಬಿಸಿ ಮುಟ್ಟಿಸಿದ್ದಾರೆ. ಸ್ಟಂಟ್ ಮಾಡಿದ ಮತ್ತಿಬ್ಬರನ್ನು ಪತ್ತೆ ಹಚ್ಚಿ ದಂಡಿ ವಿಧಿಸಿದ್ದಾರೆ.
ಪ್ರಕರಣ 1 : ಸೂಳೆಬೈಲು ಸಮೀಪ ವೀಲಿಂಗ್
ನಗರದ ಸೂಳೆಬೈಲು ಸಮೀಪ ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕನನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ. ರೇಸಿಂಗ್ ಅಂಡ್ ಟ್ರಯಲ್ ಆಫ್ ಸ್ಪೀಡ್, ನಂಬರ್ ಪ್ಲೇಟ್ ಇಲ್ಲದಿರುವುದು ಮತ್ತು ಹೆಲ್ಮೆಟ್ ಧರಿಸದಿರುವುದಕ್ಕೆ ದಂಡ ವಿಧಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಬೈಕ್ ಸವಾರನಿಗೆ 6 ಸಾವಿರ ರೂ. ದಂಡ ವಿಧಿಸಿದೆ.
ಪ್ರಕರಣ 2 : ಗೋಪಿ ಸರ್ಕಲ್
ಗೋಪಿ ಸರ್ಕಲ್ ಸಮೀಪ ಬೈಕ್ ವೀಲಿಂಗ್ ಮಾಡಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿತ್ತು. ರೇಸಿಂಗ್ ಅಂಡ್ ಟ್ರಯಲ್ ಆಫ್ ಸ್ಪೀಡ್ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ 5 ಸಾವಿರ ರೂ. ದಂಡ ವಿಧಿಸಿದೆ.
ಪಶ್ಚಿಮ ಸಂಚಾರ ಠಾಣೆ ಸಿಬ್ಬಂದಿ ಅಶೋಕ್, ನಾಸಿರ್ ಅಹಮ್ಮದ್, ದಿನೇಶ್, ಹರೀಶ್ ಅವರು ವೀಲಿಂಗ್ ಮಾಡಿದವರನ್ನು ಪತ್ತೆ ಹಚ್ಚಿದ್ದರು. ಪಿಎಸ್‌ಐ ತಿರುಮಲೇಶ್ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವೀಲಿಂಗ್ ಹಾವಳಿಗೆ ಬ್ರೇಕ್
ವೀಲಿಂಗ್ ಮಾಡುತ್ತ ಅಪಾಯಕಾರಿಯಾಗಿ ಬೈಕ್‌ಗಳನ್ನು ಓಡಿಸುತ್ತಿದ್ದವರಿಗೆ ಸಂಚಾರ ಠಾಣೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ನಗರದಲ್ಲಿ ಯಾವುದೇ ರಸ್ತೆಯಲ್ಲಿ ವೀಲಿಂಗ್ ಮಾಡಿದರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ, ಭಾರಿ ಪ್ರಮಾಣದ ದಂಡ ವಿಧಿಸುತ್ತಿದ್ದಾರೆ. ಇದರಿಂದ ನಗರದಲ್ಲಿ ಬೈಕ್ ವೀಲಿಂಗ್ ಹಾವಳಿ ತಗ್ಗಿದೆ.
ಇದನ್ನೂ ಓದಿ – ಪೆನ್ಸಿಲ್ ಲೆಡ್‌ನಲ್ಲಿ 1 ಸೆಂಟಿ ಮೀಟರ್‌ನ ರಾಮ ಮಂದಿರ ನಿರ್ಮಿಸಿದ ಭದ್ರಾವತಿ ಯುವಕ, ಹೇಗಿದೆ? ನಿರ್ಮಿಸಿದ್ದು ಹೇಗೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422