ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ದ್ವಿಚಕ್ರ ವಾಹನದ ಮೇಲೆ ಸಾಲ ಬಾಕಿ (Loan) ಇದೆ ಎಂದು ಹೆದರಿಸಿ, ಕೇಸ್ ಹಾಕುವ ಬೆದರಿಕೆಯೊಡ್ಡಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ₹27,900 ವಂಚಿಸಲಾಗಿದೆ.
ಶಿವಮೊಗ್ಗದ ಮಹಿಳೆಗೆ (ಹೆಸರು ಗೌಪ್ಯ) ಕರೆ ಮಾಡಿದ ವ್ಯಕ್ತಿಯೊಬ್ಬ ಬೆಂಗಳೂರಿನ ಕೋರಮಂಗಲದಲ್ಲಿರುವ ಫೈನಾನ್ಸ್ ಕಂಪನಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದ. ದ್ವಿಚಕ್ರ ವಾಹನದ ಮೇಲಿನ ಸಾಲದ ಕಂತು ಎರಡು ತಿಂಗಳಿನಿಂದ ಪಾವತಿಸಿಲ್ಲ. ಕೂಡಲೆ ಪಾವತಿಸಬೇಕು ಎಂದು ಹೆದರಿಸಿದ್ದ. ಕ್ಯೂ ಆರ್ ಕೋಡ್ ಕಳುಹಿಸಿ ₹14,650 ವರ್ಗಾಯಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಂಕ್‌ನಿಂದ ಹೊರ ಬಂದ ವ್ಯಕ್ತಿಗೆ ಕಾದಿತ್ತು ಆಘಾತ
ಸ್ವಲ್ಪ ದಿನದ ಬಳಿಕ ಅದೇ ಫೈನಾನ್ಸ್ ಸಂಸ್ಥೆಯ ಲಾಯರ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಮಹಿಳೆಗೆ ಕರೆ ಮಾಡಿದ್ದ. ಹಣ ಕಟ್ಟದೆ ಇದ್ದರೆ ಕೇಸ್ ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದ. ಕುಟುಂಬದಲ್ಲಿರುವ ಎಲ್ಲರ ಆಧಾರ್ ಕಾರ್ಡ್ ರದ್ದುಗೊಳಿಸುವುದಾಗಿ ಹೆದರಿಸಿದ್ದ. ಹಾಗಾಗಿ ಮಹಿಳೆ ₹9900 ಕಟ್ಟಿಸಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೂರನೆ ಬಾರಿ ಕರೆ ಮಾಡಿದ ವ್ಯಕ್ತಿ, ಲೋನ್ ಕ್ಲಿಯರ್ ಮಾಡಿದ ಸರ್ಟಿಫಿಕೇಟ್‌ಗೆ ಎಂದು ₹3350 ಹಣ ವರ್ಗಾಯಿಸಿಕೊಂಡಿದ್ದ. ದ್ವಿಚಕ್ರ ವಾಹನದ ಸಾಲದ ಹೆಸರಿನಲ್ಲಿ ಬೆದರಿಕೆಯೊಡ್ಡಿ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರಿ ನೀಡಿದ್ದಾರೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

woman was threatened to pay loan
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

- ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್? 16 ಮಾರ್ಚ್ 2026 – ಅಡಿಕೆ ಧಾರಣೆ

- ತೀರ್ಥಹಳ್ಳಿ ಮಹಿಳೆಯರಿಗೆ ಮೊದಲ ಮೂರು ಬಹುಮಾನ, ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?

- ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಅಪಘಾತ, ಯುವಕನಿಗೆ ಬಸ್ ಡಿಕ್ಕಿ, ಆಗಿದ್ದೇನು?

- ಶಿವಮೊಗ್ಗದ ಇಂಜಿನಿಯರ್‌ಗೆ ಸಂಕಷ್ಟ ತಂದ ಮರೆವು, ಫ್ಲೈ ಓವರ್ ಬಳಿ ಆಗಿದ್ದೇನು? ಕೇಸ್ ದಾಖಲು

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















