ಶಿವಮೊಗ್ಗ ಲೈವ್.ಕಾಂ | ELECTRIC POLE | 7 MAY 2022
ಉಂಬೈಬೈಲ್-ಲಿಂಗಾಪುರದಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡುವಾಗ ವಿದ್ಯುತ್ ಕಂಬದಿಂದ ಬಿದ್ದು ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿಕಾರಿಪುರದ ಹುಚ್ಚರಾಯಪ್ಪ ಗಾಯಾಳು, ಫೆ.3ರಂದು ಶಿರಾಳಕೊಪ್ಪದ ಎಲೆಕ್ಟ್ರಿಕಲ್ ಗುತ್ತಿಗೆದಾರ ಸಚಿನ್ ಉಂಬೈಬೈಲ್-ಲಿಂಗಾಪುರ ಗ್ರಾಮಕ್ಕೆ ವಿದ್ಯುತ್ ಕಾಮಗಾರಿಗೆ ಹುಚ್ಚರಾಯಪ್ಪನನ್ನು ಕರೆದೊಯ್ದಿದ್ದ ಎಂದು ಆರೋಪಿಸಲಾಗಿದೆ.
ಸುರಕ್ಷಿತ ಕ್ರಮವಿಲ್ಲ
ಯಾವುದೇ ಸುರಕ್ಷಿತಾ ಕ್ರಮ ಅನುಸರಿಸದೆ ಹುಚ್ಚರಾಯಪ್ಪನನ್ನು ವಿದ್ಯುತ್ ಕಂಬ ಹತ್ತಿಸಲಾಗಿತ್ತು. ಈ ವೇಳೆ ವಿದ್ಯುತ್ ಕಂಬದಿಂದ ಬಿದ್ದು ಹುಚ್ಚರಾಯಪ್ಪ ಸೊಂಟ ಮುರಿದುಕೊಂಡಿದ್ದ. ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ಗುತ್ತಿಗೆದಾರ ಸಚಿನ್ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದ.
ಇದುವರೆಗೆ ಗುತ್ತಿಗೆದಾರ ಚಿಕಿತ್ಸಾ ವೆಚ್ಚ ಭರಿಸುವಲ್ಲಿ ವಿಫಲನಾಗಿದ್ದಾನೆ. ಹಾಗಾಗಿ ಹುಚ್ಚರಾಯಪ್ಪನ ತಂದೆ ವಿಜಯಕುಮಾರ್ ಅವರು ತುಂಗಾನಗರ ಠಾಣೆಯಲ್ಲಿ ಸಚಿನ್ ವಿರುದ್ಧ ದೂರು ನೀಡಿದ್ದಾರೆ.
ಇದನ್ನೂ ಓದಿ – ಡ್ರಾಪ್ ಕೇಳಿದವನೆ ಬೈಕ್ ಕದ್ದೊಯ್ದ, ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಪ್ರಕರಣ, ಹೇಗಾಯ್ತು ಕಳವು?