SHIVAMOGGA LIVE NEWS | 28 SEPTEMBER 2023
SHIMOGA : ಹಿಂದೂ ಮಹಾಸಭಾ ಗಣಪತಿ (Hindu Mahasabha Ganapati) ಮೂರ್ತಿಗೆ ಈ ಬಾರಿಯು ಧನಂಜಯ ಅವರೆ ಸಾರಥಿಯಾಗಿದ್ದಾರೆ. ಸುಮಾರು ಮೂರುವರೆ ದಶಕದಿಂದ ಧನಂಜಯ ಅವರೆ ರಾಜಬೀದಿ ಉತ್ಸವದ ಟ್ರಾಕ್ಟರ್ ಚಲಾಯಿಸುತ್ತಿದ್ದಾರೆ.
‘ಗಣಪತಿ ರಾಜಬೀದಿ ಉತ್ಸವಕ್ಕೆ ಧನಂಜಯ ಅವರು ತಮ್ಮದೆ ಟ್ರಾಕ್ಟರ್ ತರುತ್ತಿದ್ದಾರೆ. ಪ್ರತಿ ವರ್ಷ ಅವರೆ ಟ್ರಾಕ್ಟರ್ ಚಲಾಯಿಸುತ್ತಾರೆ. ಸುಮಾರು 35 ವರ್ಷದಿಂದ ಇವರು ಹಿಂದೂ ಮಹಾಸಭಾ ಗಣಪತಿಗೆ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಹಿಂದೂ ಸಂಘಟನೆಗಳ ಮುಖಂಡ ದೀನದಯಾಳು ಅವರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು.
ಬೆಳಗ್ಗೆ 10.30ಕ್ಕೆ ಮೆರವಣಿಗೆ ಆರಂಭವಾಗಿದ್ದು ನಡುರಾತ್ರಿ ಗಣಪತಿ ವಿಸರ್ಜನೆಯಾಗಲಿದೆ. ಅಲ್ಲಿಯ ತನಕ ಧನಂಜಯ ಅವರು ಒಂದು ಕ್ಷಣವು ಟ್ರಾಕ್ಟರ್ನಿಂದ ಕೆಳಗಿಳಿಯದೆ ತಾಳ್ಮೆಯಿಂದ ಟ್ರಾಕ್ಟರ್ ಚಲಾಯಿಸುತ್ತಾರೆ.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಬಂದೋಬಸ್ತ್ಗೆ ಸಾವಿರ ಸಾವಿರ ಪೊಲೀಸ್, ಸಿಟಿಯಲ್ಲಿ ರೂಟ್ ಮಾರ್ಚ್, ಸಿಬ್ಬಂದಿಗೆ ಗುಣಮಟ್ಟದ ಊಟಕ್ಕೆ ಪ್ಲಾನ್
ಎತ್ತಿನ ಗಾಡಿಯಲ್ಲಿ ಸಾಗುತ್ತಿತ್ತು
ಆರಂಭದಲ್ಲಿ ಹಿಂದೂ ಮಹಾಸಭಾ ಗಣಪತಿಯ (Hindu Mahasabha Ganapati) ರಾಜಬೀದಿ ಉತ್ಸವ ಎತ್ತಿನ ಗಾಡಿಯಲ್ಲಿ ನಡೆಯುತ್ತಿತ್ತು ಎಂದು ದೀನದಯಾಳು ತಿಳಿಸುತ್ತಾರೆ. ಈ ಮೊದಲು ಟ್ರಾಕ್ಟರ್, ಟ್ರಿಲ್ಲರ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಎತ್ತಿನ ಗಾಡಿಯಲ್ಲಿ ರಾಜಬೀದಿ ಉತ್ಸವ ನಡೆಯುತ್ತಿತ್ತು. ಆಗಲು ದೊಡ್ಡ ಸಂಖ್ಯೆಯ ಭಕ್ತರು ಗಣಪತಿಯ ದರ್ಶನಕ್ಕೆ ಆಗಮಿಸುತ್ತಿದ್ದರು.
