ಮೇಷ
ದಿಢೀರ್ ಅನಾರೋಗ್ಯ ಸಾಧ್ಯತೆ. ವ್ಯಾಪಾರ, ವ್ಯವಹಾರ ಚನ್ನಾಗಿ ನಡೆಯಲಿದೆ. ಪಾಲುದಾರಿಕೆ ಉದ್ಯಮಕ್ಕೆ ಕೈ ಜೋಡಿಸುವ ಮುನ್ನ ಅನುಭವಿಗಳಿಂದ ಸಲಹೆ ಪಡೆಯುವುದು ಸೂಕ್ತ. ತಂದೆ ತಾಯಿಯಿಂದ ಆಶೀರ್ವಾದ.
ವೃಷಭ
ಹಣಕಾಸು ಕೊರತೆ. ತುರ್ತು ಸಂದರ್ಭದಲ್ಲು ಯಾರೂ ನೆರವಿಗೆ ನಿಲ್ಲುವುದಿಲ್ಲ. ಕುಟುಂಬದೊಂದಿಗೆ ವಿರಸ. ಮನೆಯಲ್ಲಿ ಆಶಾಂತ ವಾತಾವರಣ. ವಸ್ತುಗಳ ಖರೀದಿ ವಿಚಾರದಲ್ಲಿ ಸಂಗಾತಿಯೊಂದಿಗೆ ಕಲಹ.
![]() |
ಮಿಥುನ
ದುಡುಕು ಮತ್ತು ಆತುರದ ನಿರ್ಧಾರದಿಂದ ನಿರಾಸೆ. ಕೆಲಸಗಳು ಕೈಗೂಡುವುದಿಲ್ಲ. ಸಂಗಾತಿಯೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತೀರಿ. ಸ್ವಯಂ ವಿಶ್ವಾಸದಿಂದ ಮುಂದೆ ಗೆಲುವು ಸಾಧಿಸುತ್ತೀರ.
ಕರ್ಕಾಟಕ
ಆಲೋಚನೆಗಳ ಮೇಲೆ ನಿಯಂತ್ರಣವಿರಲಿ. ಹೊಸ ಬಗೆಯ ಯೋಚನೆಯಿಂದ ನಿಮ್ಮ ವ್ಯಕ್ತಿತ್ವ ವೃದ್ಧಿಯಾಗಲಿದೆ. ಸ್ವತಂತ್ರವಾಗಿ ಹಣ ಸಂಪಾದನೆ ಮಾಡುತ್ತೀರಿ. ದೃಢತೆಯಿಂದ ಸಾಧನೆ ಸಾಧ್ಯ.
ಸಿಂಹ
ದೃಢವಾಗಿ ಕೆಲಸ ಮಾಡಿ. ನಿಮ್ಮ ಮೇಲಿನ ವಿಶ್ವಾಸ ಕಳೆದುಕೊಳ್ಳಬೇಡಿ. ಅವಲಂಬಿತರಾಗಬೇಡಿ. ಸಕಾರಾತ್ಮಕ ಆಲೋಚನೆಗಳಿಂದ ನಿಮ್ಮ ಸಮಸ್ಯೆಗಳಿಂದ ಪಾರಾಗುತ್ತೀರ.
ಕನ್ಯಾ
ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ವಿಳಂಬ ಮಾಡಬೇಡಿ. ಉತ್ತಮ ಫಲಿತಾಂಶ ಲಭಿಸಲಿದೆ. ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಆರೋಗ್ಯ ಸುಧಾರಣೆಗೆ ಕಾರಣವಾಗಲಿದೆ.
ತುಲಾ
ಮಾನಸಿಕ ಒತ್ತಡ. ವ್ಯಾಪಾರದಲ್ಲಿ ಉತ್ತಮ ಪ್ರಗತಿ. ನಿಮ್ಮ ಉದ್ಯಮದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುತ್ತೀರ. ಆಸಕ್ತಿದಾಯಕ ಸಂಗೀತ ಕೇಳುವುದರಿಂದ ಮನಸಿಗೆ ನೆಮ್ಮದಿ.
ವೃಶ್ಚಿಕ
ಅಧ್ಯಯನದ ಕಡೆಗೆ ಹೆಚ್ಚು ಗಮನ ಹರಿಸಿ. ಸಮಯ ವ್ಯಯ ಮಾಡುವುದರಿಂದ ಭವಿಷ್ಯದಲ್ಲಿ ಪೆಟ್ಟು. ಬಾಕಿ ಉಳಿದ ಕೆಲಸಗಳ ನಿರ್ವಹಣೆಗೆ ಸಹೋದ್ಯೋಗಿಗಳು ನೆರವಾಗುತ್ತಾರೆ.
ಧನಸ್ಸು
ಮಾನಸಿಕ ಶಾಂತಿ. ಹಿರಿಯರು ಮತ್ತು ಅನುಭವಿಗಳಿಂದ ಸಲಹೆ ಪಡೆಯುವುದು ಸೂಕ್ತ. ಹೊಸ ಯೋಜನೆ ಜಾರಿಗೊಳಿಸಲು ಸೂಕ್ತ ಸಮಯ. ಪುಸ್ತಕಗಳತ್ತ ಆಸಕ್ತಿ ಬೆಳೆಸಿಕೊಳ್ಳಿ.
ಮಕರ
ದುರ್ಗುಣಗಳಿಂದ ಮುಕ್ತಿ. ಸಾಲ ಮಾಡುವ ಅನಿವಾರ್ಯತೆ. ನಿಮ್ಮ ಜೀವನ ಶೈಲಿ ಬಗ್ಗೆ ಕುಟುಂಬದವರಿಗೆ ಆತಂಕ. ವೈಯಕ್ತಿಕ ಬದುಕಿಗೆ ಸಮಯ ಮೀಸಲಿಡಿ.
ಕುಂಭ
ಆರೋಗ್ಯದಲ್ಲಿ ಸುಧಾರಣೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ಕೆಲಸದ ಸ್ಥಳದಲ್ಲಿ ಬಡ್ತಿ ಅಥವಾ ಆರ್ಥಿಕವಾಗಿ ಅನುಕೂಲವಾಗಲಿದೆ.
ಮೀನ
ದಿಢೀರ್ ಪ್ರಯಾಣ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಯಾರ ಒತ್ತಡಕ್ಕೂ ಮಣಿಯಬೇಡಿ. ಹಣ ಸಂಪಾದನೆಯ ಕುರಿತು ಹೆಚ್ಚು ಯೋಚನೆ ಮಾಡುವುದು ಒಳಿತು.
ಯಾರ ಮನೆಯಲ್ಲಿ ದೇವರಿಗೆ ಬೆಳ್ಳಿಯ ದೀಪದಲ್ಲಿ ಹಸುವಿನ ತುಪ್ಪ, ಕೊಬ್ಬರಿ ಎಣ್ಣೆ ಅಥವಾ ಸೂರ್ಯಕಾಂತಿ ಎಣ್ಣೆಯಿಂದ ದೀಪ ಹಚ್ಚುತ್ತಾರೆಯೋ, ಅವರಿಗೂ ಮತ್ತು ಆ ಮನೆಯವರಿಗೂ ಅಷ್ಟನಿಧಿ ಹಾಗೂ ನವನಿಧಿ ಪ್ರಾಪ್ತಿಯಾಗುತ್ತದೆ. ದೀಪ ದುರ್ಗಾ ದೇವಿ ಮತ್ತು ಮಹಾಲಕ್ಷ್ಮಿಯು ಅನುಗ್ರಹವಾಗಿ, ಉತ್ತಮ ಜೀವನ ನಡೆಸುತ್ತಾರೆ. ಅಂತಹ ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣವಿರುತ್ತದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200