SHIVAMOGGA LIVE NEWS | 2 JANUARY 2023
ಮೇಷ
ದೀರ್ಘ ಪ್ರಯಾಣ ಸಂಭವ. ಹಣಕಾಸು ಹೂಡಿಕೆಯತ್ತ ಗಮನ ಕೊಡಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಸರಿಯಾದ ಗೌರವ ಸಿಗುತ್ತಿಲ್ಲ. ಗಟ್ಟಿಯಾಗಿ ಮಾತನಾಡಿದರಷ್ಟೆ ನಿಮ್ಮ ಕೆಲಸಕ್ಕೆ ಗೌರವ ಲಭಿಸಲಿದೆ.
ವೃಷಭ
ಆರೋಗ್ಯ ಕುರಿತು ಗಮನ ವಹಿಸಿ. ಜೀವನ ಶೈಲಿ ಬದಲಾಯಿಸಿಕೊಳ್ಳುವತ್ತ ಗಂಭೀರ ಚಿಂತನೆ. ಹೆಚ್ಚು ಪ್ರಸನ್ನರಾಗಿರುತ್ತೀರ. ಕೆಲಸ ಕಾರ್ಯಗಳು ಸುಲಭವಾಗಿ ಸಾಗಲಿವೆ.
ಮಿಥುನ
ಸೇವಿಸುವ ಆಹಾರದ ಮೇಲೆ ನಿಗಾ ಇರಲಿ. ಒತ್ತಡದ ದಿನದ ಕಾರಣಕ್ಕೆ ಕುಟುಂಬದವರ ಮೇಲೆ ಸಿಡುಕು. ಸಾಲಗಾರರ ಕಾಟ. ಸಾಲ ತೀರಿಸುವ ಅವಕಾಶ. ಹಣಕಾಸು ವಿಚಾರದಲ್ಲಿ ತುಸು ನೆಮ್ಮದಿ.
ಕರ್ಕಾಟಕ
ನೀವು ಇಷ್ಟಪಡುವ ತಾಣವೊಂದಕ್ಕೆ ಪ್ರವಾಸ ಕೈಗೊಳ್ಳಲು ಯೋಜನೆ ಸಿದ್ದಪಡಿಸಿಕೊಳ್ಳುತ್ತೀರಿ. ಈ ದಿನ ಯಾರಿಗು ಕೈ ಸಾಲ ಕೊಡಬೇಡಿ. ಸಂಗಾತಿಗೆ ವಿಶೇಷ ಉಡುಗೊರೆ ನೀಡಿ, ಖುಷಿಪಡಿಸಿ. ಕೆಲಸದ ಸ್ಥಳದಲ್ಲಿ ಮೆಚ್ಚುಗೆ.
ಸಿಂಹ
ಕೆಲಸದ ಕುರಿತು ನಿಮ್ಮ ದೃಷ್ಟಿಕೋನ ಬದಲಿಸಿಕೊಂಡರೆ ಆದಾಯ ಹೆಚ್ಚಲಿದೆ. ಒಂಟಿತನ ಕಾಡಲಿದೆ. ವಾರಾಂತ್ಯದ ಪ್ರಯಾಣಕ್ಕೆ ಸಜ್ಜಾಗಿ. ಹಣ ಖರ್ಚು ಮಾಡುವಾಗ ಎಚ್ಚರವಿರಲಿ.
ಕನ್ಯಾ
ಕೆಲಸ, ಸ್ನೇಹಿತರು, ಕುಟುಂಬಕ್ಕೆ ಸಮಯ ಹೊಂದಾಣಿಕೆ ಕಷ್ಟವಾಗಲಿದೆ. ಕಚೇರಿಯಲ್ಲಿನ ಸಣ್ಣ ತಪ್ಪು ನಿಮ್ಮ ಉದ್ಯೋಗದ ಮೇಲೆ ಪ್ರಭಾವ ಬೀರಲಿದೆ. ಪ್ರತಿ ಕ್ಷಣವನ್ನು ಆನಂದಿಸಿ. ಹೊಸ ವ್ಯಕ್ತಿಗಳ ಪರಿಚಯ ಸಾಧ್ಯತೆ.
ತುಲಾ
ಚರ್ಮ ಸಂಬಂಧಿ ಸಮಸ್ಯೆ ಉಂಟಾಗಲಿದೆ. ಬಾಜಿ ಕಟ್ಟುವುದರಿಂದ ಹಣ ನಷ್ಟವಾಗಲಿದೆ. ಪ್ರವಾಸ ಕೈಗೊಳ್ಳುವ ಉದ್ದೇಶ ಹೊಂದಿದ್ದರೆ ಈಗಲೆ ಯೋಜನೆ ಸಿದ್ಧಪಡಿಸಿಕೊಳ್ಳಿ. ಇದರಿಂದ ಖರ್ಚು ಕಡಿಮೆಯಾಗಲಿದೆ.
ವೃಶ್ಚಿಕ
ಅನಿರೀಕ್ಷಿತವಾಗಿ ಹಣ ಕೈ ಸೇರಲಿದೆ. ಒಂಟಿತನದ ಅಪೇಕ್ಷೆ. ವ್ಯಾಪಾರ, ವ್ಯವಹಾರ ಮಾಡುತ್ತಿರುವವರಿಗೆ ಲಾಭವಾಗಲಿದೆ. ವ್ಯಾಯಾಮದಿಂದ ದೇಹದ ಆರೋಗ್ಯ ಸುಧಾರಣೆ.
ಧನು
ಹೊಸಬರ ಪರಿಚಯದಿಂದ ವ್ಯಾಪಾರ, ವ್ಯವಹಾರಕ್ಕೆ ಅನುಕೂಲ. ಮಾತಿಗೆ ಮರಳಾಗದೆ ಸತ್ಯಾಸತ್ಯತೆ ಪರಿಶೀಲಿಸಿ ಒಪ್ಪಂದಗಳಿಗೆ ಮುಂದಾಗಿ. ಮಕ್ಕಳೊಂದಿಗೆ ಕಿರು ಪ್ರವಾಸ ಸಾಧ್ಯತೆ.
ಮಕರ
ಪತಿ ಅಥವಾ ಪತ್ನಿ ಜೊತೆಗೆ ಮುಕ್ತವಾಗಿ ಮಾತನಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ. ವಿಶ್ರಾಂತಿಯ ಅಗತ್ಯವಿದೆ. ಆರೋಗ್ಯದ ಕಡಗೆ ಗಮನ ವಹಿಸಿ.
ಕುಂಭ
ತುರ್ತು ಹಣಕ್ಕಾಗಿ ಸ್ನೇಹಿತರೊಬ್ಬರಿಂದ ಬೇಡಿಕೆ. ನಂಬಕೆಗೆ ಅರ್ಹವಾಗಿದ್ದರಷ್ಟೆ ಹಣ ಕೊಡುವುದು ಸೂಕ್ತ. ತಣ್ಣನೆ ಆಹಾರ ಸೇವನೆ ಬೇಡ. ನಿಮ್ಮ ಕುರಿತು ನೀವು ಹೆಚ್ಚು ಯೋಚಿಸುವುದು ಒಳಿತು.
ಮೀನ
ಸಂಗಾತಿಯೊಂದಿಗೆ ಸುಳ್ಳು ಹೇಳಬೇಡಿ. ನಿಮ್ಮ ಸಾಧನೆಯಲ್ಲಿ ಸಹೋದ್ಯೋಗಿಗಳ ಪಾಲುದಾರರಾಗಲು ಮುಂದಾಗುತ್ತಾರೆ. ಅವಕಾಶ ಕೊಡಬೇಡಿ. ಭುಜಕ್ಕೆ ಪೆಟ್ಟು ಬೀಳುವ ಸಾಧ್ಯತೆ. ಎಚ್ಚರದಿಂದಿರಿ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200