ದಿನ ಭವಿಷ್ಯ | ಈ ದಿನ ಯವ್ಯಾವ ರಾಶಿಗೆ ಹೇಗಿದೆ? ಸಮಸ್ಯೆಗಳಿಗೆ ಪರಿಹಾರವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

» ಮೇಷ : ಭೂಮಿಯ ವಿಚಾರದಲ್ಲಿ ಮಾತುಕಥೆ. ಮಕ್ಕಳಲ್ಲಿ ಆಲಸ್ಯ. ಧೀರ್ಘ ಕಾಲದ ಸಮಸ್ಯೆ ಸ್ವಲ್ಪ ಪರಿಹಾರ. ಉತ್ತಮ ಫಲ. (Bhavishya)

ಪರಿಹಾರ: ಆಂಜನೇಯನಿಗೆ ಬಾಳೆಗೊನೆ ದಾನ ಮಾಡಿ.

ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ

» ವೃಷಭ : ಬುದ್ದಿ ಪ್ರಚೋದಿಸಿದರೂ ಸ್ತ್ರೀ ಸಂಬಂಧಿತ ಅಪವಾದ ಬರುತ್ತದೆ. ಕೆಲಸದಲ್ಲಿ ಉತ್ಸಾಹ ಕಡಿಮೆ. ಏನೋ ಯೋಚಿಸಿ ನಷ್ಟ ಜಾಸ್ತಿ.

ಪರಿಹಾರ : ದೇವಿ ದೇವಸ್ಥಾನದಲ್ಲಿ ಮೊಸರನ್ನ ಮಾಡಿ ಹಂಚಿ..

ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು

» ಮಿಥುನ : ಯೋಚನೆಗೆ ಸಹಕಾರವಿಲ್ಲದಿದ್ದರೂ. ಸಹಮತವಿದೆ. ಬಂಧುಗಳ ವಿರೋಧ. ಓದಿನ ಅಸಕ್ತಿ ಕಡಿಮೆ. ಶುಭವಿದ್ದರೂ ತಡವಾದೀತು.

ಪರಿಹಾರ : ಹೆಣ್ಣು ಮಕ್ಕಳಿಗೆ ಅಲಂಕಾರಿಕ ಪದಾರ್ಥ (ಕುಮಾರಿ ಪೂಜೆ) ನೀಡಿ ಗೌರವಿಸಿ.

ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು

» ಕರ್ಕ : ಮನೆಯಲ್ಲಿನ ವಾತಾವರಣ ಸರಿ ಇಲ್ಲ. ಮೆಲು ಮಾತನಾಡಿ. ಕೋಪ ಕಡಿಮೆ ಇರಲಿ. ಹೊರಗೆ ನೆಮ್ಮದಿ ಇದೆ. ಕೆಲಸ ಕಾರ್ಯ ಚೆನ್ನಾಗಿದೆ.

ಪರಿಹಾರ : ಗ್ರಹಗಳ ದೇವಸ್ಥಾನ ತೆರಳಿ ಎಳ್ಳೆಣ್ಣೆ ದಾನ ಮಾಡಿ.

ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ

SANDESH-UPADHYA-DINA-BHAVISHYA-SHIMOGA

» ಸಿಂಹ : ವಿಪರೀತ ಹಣ ಖರ್ಚು. ಯೋಚನೆ ಮಾಡಿದರೂ ನಷ್ಟ ತಪ್ಪಿಸಲು ಸಾಧ್ಯವಿಲ್ಲ. ಉದ್ಯೋಗದಲ್ಲಿ ಸ್ಥಿರ. ಮನಸ್ಸಿ ಸ್ವಲ್ಪ ಖುಷಿ.

ಪರಿಹಾರ : ನಾಗನಿಗೆ ಜೇನುತುಪ್ಪ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ

» ಕನ್ಯಾ : ಯೋಚನಾ ಶಕ್ತಿ ಕಳೆದುಕೊಂಡಿರಿ ಹುಷಾರು. ಅನ್ಯರ ಸಹವಾಸ ಬೇಡ. ಆರೋಗ್ಯ ಹದಗೆಡುತ್ತದೆ. ಆದರೂ ನಷ್ಟವಿಲ್ಲ. 

ಪರಿಹಾರ : ಬಡ ಮಕ್ಕಳ ಆಹಾರಕ್ಕೆ ಹುರಳಿ – ಉದ್ದು ದಾನ ಮಾಡಿ. ಗಣೇಶನ ಗುಡಿಗೆ ಹೋಗಿ ನಮಸ್ಕರಿಸಿ.

ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು

» ತುಲಾ : ಚೆನ್ನಾಗಿದೆ. ಯೋಚನೆ ತಪ್ಪಿಲ್ಲ. ದೇವರ ದಯೆ ಇದೆ. ಹಾಗೆಯೇ ತೊಂದರೆಯೂ ಬರುತ್ತದೆ. ಹಣದ ಅಡೆಚಣೆ ನಡುವೆಯೂ ಹೊಂದಾಣಿ ಆಗುತ್ತದೆ.

ಪರಿಹಾರ : ದಶರಥಕೃತ ಶನಿ ಸ್ತೋತ್ರ ಪಾಪಾಯಣ ಮಾಡಿಸಿ.

ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು

Parishrama advt 10 feb 2025 1

» ವೃಶ್ಚಿಕ : ಉದ್ಯೋಗದಲ್ಲಿ ಹೇಳುವಷ್ಟು ಸಮಾಧಾನವಿಲ್ಲ. ಕಾರ್ಯ ಒತ್ತಡ. ಅತಿಯಾದ ಬುದ್ಧಿವಂತಿಗೆ ತೆಂದರೆಗೆ ಆಹ್ವಾನ. ಲಾಭವೂ ಇಲ್ಲ. ನಷ್ಟವೂ ಇಲ್ಲ.

ಪರಿಹಾರ : ನಾಗದೇವರಿಗೆ ಹಯಗ್ರೀವ ಮಾಡಿ ಎಲ್ಲರಿಗೂ ಹಂಚಿ.

ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ

» ಧನು : ಸ್ತ್ರೀಯಿಂದ ಯೋಗವಿದೆ. ಮನೆಯಲ್ಲಿ ತೊಂದರೆ. ಬಂಧುಗಳ ಆಗಮನ. ಅನ್ಯ ಕಾರ್ಯದಲ್ಲಿ ವೃಥಾ ತಿರುಗಾಟ.

ಪರಿಹಾರ : ಮಣ್ಣಿನ ವಸ್ತುಗಳನ್ನ ಖರೀದಿಸಿ ಹಲವರಿಗೆ ನೀಡಿ.

ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ

» ಮಕರ : ಹಣವಿದ್ದರೂ ಪ್ರಯೋಜನವಿಲ್ಲ. ಓದಿನಲ್ಲಿ ಪ್ರಗತಿ. ನೆಮ್ಮದಿ. ಭಾಗ್ಯೋದಯಕ್ಕೆ ಕಾಯಬೇಕು. ಆದರೂ ಶುಭ ಫಲವಿದೆ.

ಪರಿಹಾರ : ಕಬ್ಬಿಣದ ವಸ್ತು ನೀಲಿ ಬಟ್ಟೆ ಯನ್ನು ನಿವಾಳಿಸಿ ಬಿಸಾಡಿ.

ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು

NATIONAL-PUBLIC-SCHOOL-scaled

» ಕುಂಭ : ಶುಭಫಲದ ನಿರೀಕ್ಷೆ ಹತ್ತಿರವಿದೆ ಸಾಡೇಸಾತಿ ಸ್ವಲ್ಪ ಕಡಿಮೆ ಆದೀತು. ತಂದೆ ತಾಯಿಯ ಆಶೀರ್ವಾದ ಲಭಿಸುತ್ತದೆ. ಈದಿನ ಚೆನ್ನಾಗಿದೆ.

ಪರಿಹಾರ : ಉದ್ದಿನ ಪದಾರ್ಥ ಬಳಕೆ ಮಾಡಿ ಮುಂದಿನ ಕೆಲಸ ಪ್ರಾರಂಭಿಸಿ.

ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು

» ಮೀನ : ಜೊತೆಗೆ ಇದ್ದವರನ್ನ ನಂಬಬೇಡಿ. ಸಹೋದರರೂ ಕಷ್ಟಕೆ ಆಗರು. ಇಂದು ಒಂಟಿ ನೀವು. ಕುಲದೇವರ ಸ್ಮರಣೆ. ನಿಮ್ಮ ಹಿಂದಿನ ಸಹಾಯದ ಫಲ ಲಭಿಸುತ್ತದೆ.

ಪರಿಹಾರ : ವಟುವಿನ ಆರಾಧನೆ ಅಥವಾ ಸಣ್ಣ ಹುಡುಗರಿಗೆ ಪಠ್ಯ ಸಾಹಿತ್ಯ ನೀಡಿ ಸತ್ಕರಿಸಿ.

ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು

ಇದನ್ನೂ ಓದಿ » ಶಿವಮೊಗ್ಗ ಸಿಟಿಯ ಹಲವೆಡೆ ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment