DINA BHAVISHYA, 26 AUGUST 2024
ಮೇಷ : ಮನೋಸ್ಥೈರ್ಯ ನಿಮ್ಮ ನ್ನು ಬೆಳಸುತ್ತದೆ. ಕೊಂಚ ಹಣ ಅಭಾವ. ಆಕಸ್ಮಿಕವಾಗಿ ಬಂಧುಗಳ ತೊಂದರೆ. ಅಧಿಕ ಹಣ ವ್ಯಯ. ಹಾಲಿನ ಅಭಿಷೇಕ ಶಿವನಿಗೆ ಮಾಡಿಸಿ. ಶುಭ ಸಂಖ್ಯೆ : 1-5-8-9
![]() |
ವೃಷಭ : ಮನಸ್ಸು ಕುಗ್ಗವಂತಹ ದಿನ. ಬುದ್ಧಿವಂತಿಕೆ ನಿಮ್ಮ ಕೈ ಹಿಡಿಯಲಿದೆ. ಪರೀಕ್ಷೆಯಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ದೀಪಕ್ಕೆ 21 ನಮಸ್ಕಾರ ಮಾಡಿ. ಶುಭ ಸಂಖ್ಯೆ: 2-7-10-11
ಮಿಥುನ : ಅಪದ್ಧನ ವ್ಯಯವಾಗಲಿದೆ. ಸಹೋದರ ಸಂಬಂಧ ಉತ್ತಮ. ಶನಿ ಪೂರ್ಣ ಫಲ ನೀಡಲಾರ. ವಿಷ್ಣು ಸಹಸ್ರನಾಮ ಓದಿ. ಶುಭ ಸಂಖ್ಯೆ : 5-6-10
ಕರ್ಕ : ನೆನ್ನೆಯ ದಿನವೇ ಮುಂದುವರೆದಿದೆ. ಇಂದು ಕೂಡ ಅಷ್ಟೇನು ಉತ್ತಮವಿಲ್ಲ. ಆರೋಗ್ಯದ ಬಗ್ಗೆ ಗಮನವಿರಲಿ. ನವಗ್ರಹ ಪೂಜೆನೇ ಮಾಡಿಸಿ. ಶುಭ ಸಂಖ್ಯೆ: 4-5-1
ಸಿಂಹ : ಈ ದಿನ ಅದೃಷ್ಟ ನೀವು ಹೇಳಿದಂತೆ ಕೇಳುತ್ತದೆ. ಅಷ್ಟಮದ ರಾಹು ತೊಂದರೆ ನೀಡುತ್ತೇನೆ. ಒತ್ತಡ ಗಡಿಬಿಡಿ ಆಗಬಹುದು. ಆರೋಗ್ಯದ ಬಗ್ಗೆ ನಿಗಾ ಇರಲಿ. ಸುಬ್ರಹ್ಮಣ್ಯನನ್ನು ಸ್ತುತಿಸಿ. ಶುಭ ಸಂಖ್ಯೆ : 5-6-9-11
ಕನ್ಯಾ : ಮಿತ್ರರು ತುಂಬಾ ಆತ್ಮೀಯರಾಗುತ್ತಾರೆ. ಆದರೆ ಎಚ್ಚರ ದಾರಿ ಕೆಡಿಸಬಹುದು. ಆರೋಗ್ಯ ಸಮಸ್ಯೆಯಾದರೂ ಹೆದರಿಕೆ ಇಲ್ಲ. ದುರ್ಗಾ ಆರಾಧನೆ ಮಾಡಿ. ಶುಭ ಸಂಖ್ಯೆ : 7-10-11-03
ತುಲಾ : ನಿಮ್ಮ ಕೆಲಸಗಳು ನಿಧಾನ ಈಡೇರುತ್ತದೆ. ಅಧಿಕ ವ್ಯಯನಿದ್ದರೂ. ಹಣದ ಆಗಮನಕ್ಕೆ ಕೊರತೆ ಇಲ್ಲ. ನಿಮ್ಮ ಕೆಲಸ ನೀವೇ ನಿರ್ವಹಿಸಿ. ಒಳ್ಳೆಯದಿದೆ. ಶುಭ ಸಂಖ್ಯೆ : 8-9-4
ವೃಶ್ಚಿಕ : ನೆನ್ನೆಯ ದಿನ ಭವಿಷ್ಯ ಇಂದೂ ನಡೆಯುತ್ತಿದೆ. ಯಾವ ಬದಲಾವಣೆಯೂ ಇಲ್ಲ. ಕುಜ ಎಂಟಕ್ಕೆ ಬಂದಿರುವುದರಿಂದ ಪ್ರಯೋಜನ ಕಾಣ ಸಿಗದು. ತೊಗರಿ ಬೆಲ್ಲ ದಾನ ಮಾಡಿ. ಶುಭ ಸಂಖ್ಯೆ : 8-1-5
ಧನು : ಚತುರ್ಥದ ರಾಹು ಬಾಧಿಸುತ್ತಿದ್ದಾನೆ. ಆರೋಗ್ಯ ಉತ್ತಮವಿದೆ. ಭಾಗ್ಯ ಬಯಸದೇ ಬಂದಿದೆ. ಇಂದು ಆನಂದದಿಂದ ಇರಬಹುದು. ರವಿಯನ್ನ ಆರಾಧಿಸಿ. ಶುಭ ಸಂಖ್ಯೆ : 9-12-04
ಮಕರ : ಈ ದಿನ ಮಧ್ಯಮದ ದಿನ. ನಷ್ಟವಿಲ್ಲ. ಮನೆಯ ಗೊಂದಲ ಸ್ವಲ್ಪ ನಿವಾರಣೆ. ಆರೋಗ್ಯ ಸ್ಥಿರ. ಶನೈಶ್ಚರನ ಆರಾಧನೆ ಮಾಡಿಸಿ. ಶುಭ ಸಂಖ್ಯೆ: 10-11-02
ಕುಂಭ : ಬಡವರಿಗೆ ಅಗತ್ಯ ವಸ್ತುವಿನ ದಾನದಿಂದ ಮನಸ್ಸಿಗೆ ನೆಮ್ಮದಿ. ಕೆಲಸ ಮಂದಗತಿ. ಮನೆಯವರ ಸಹಾಯ ಖುಷಿ ನೀಡಲಿದೆ. ನವಗ್ರಹ ಪೂಜೆ ಅಗತ್ಯ. ಶುಭ ಸಂಖ್ಯೆ : 11-03-06
ಮೀನ : ಕೆಟ್ಟ ಯೋಚನೆ ನಿಮ್ಮನ್ನು ಕಾಡಲಿದೆ. ಬೇಡವೆಂದರೂ ಬರುವ ತೊಂದರೆಗೆ ನೀವೇ ದಾರಿ ಮಾಡಿಕೊಡುತ್ತೀರ. ಗುರುಗಳನ್ನು ಆರಾಧಿಸಿ. ಶುಭ ಸಂಖ್ಯೆ : 12-1-8-5
ಇದನ್ನೂ ಓದಿ ⇒ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನೂತನ ಅಧ್ಯಕ್ಷ, ಪದಾಧಿಕಾರಿಗಳು, ಅವಿರೋಧ ಆಯ್ಕೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200