DINA BHAVISHYA, 3 SEPTEMBER 2024
» ಮೇಷ : ಮನೆಯ ಸಮಸ್ಯೆ ನಿವಾರಣೆ ಆಗುವ ದಿನ. ಮಿತ್ರ ಗ್ರಹ ಬರುವ ಸೂಚನೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲ. ನಿಮ್ಮ ಆರೋಗ್ಯ ನೋಡಿಕೊಳ್ಳಿ. ಶುಭವಿದೆ.
ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ
» ವೃಷಭ : ಸಮಸ್ಯೆ ಸರಿ ಹೋಗಿದೆ. ಆತ್ಮವಿಶ್ವಾಸ ನೆಮ್ಮದಿಯನ್ನು ತಂದಿದೆ. ಆರ್ಥಿಕವಾಗಿ ಬಲ ಇದ್ದೀರ. ತೊಂದರೆ ಇಲ್ಲ. ನಾಗನನ್ನು ನೆನಯಿರಿ.
ಶುಭ ಸಂಖ್ಯೆ : 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
» ಮಿಥುನ : ಭಾದ್ರಪದ ಮಾಸ ನಿಮಗೆ ಭದ್ರತೆ ತಂದಿದೆ. ತೊಂದರೆ ಇಲ್ಲ. ಆಲಸ್ಯವಿದೆ. ನಿಧಾನ ಕಾರ್ಯ. ಈ ದಿನ ಉತ್ತಮವಿದೆ. ದುರ್ಗೆಯ ಸ್ಮರಣೆ ಮಾಡಿ.
ಶುಭ ಸಂಖ್ಯೆ : 5-6-10, ಬಣ್ಣ : ಹಳದಿ-ಕೆಂಪು-ಹಸಿರು
» ಕರ್ಕ : ಮನಸ್ಸು ಶುದ್ಧವಾಗಿವ ದಿನ ಬರುತ್ತಿದೆ. ಯೋಚನೆಗಳು ದೂರವಾಗುವ ದಿನ ಹತ್ತಿರವಿದೆ. ಸರ್ವ ರೀತಿಯಲ್ಲಿ ಉತ್ತಮ ಫಲವಿದೆ. ಭಾಗ್ಯೋದಯವೇ ಸ್ವಲ್ಪ ಕಷ್ಟ. ನಾಗನಿಗೆ ನಮಸ್ಕರಿಸಿ.
ಶುಭ ಸಂಖ್ಯೆ : 4-5-1, ಬಣ್ಣ : ಬಿಳಿ-ಕೆಂಪು-ಕೇಸರಿ
» ಸಿಂಹ : ರಾಜನಂತೆ ಅನುಕೂಲ. ಹಣ ಇಂದು ಕಡಿಮೆ. ಅಷ್ಟಮದ ರಾಹು ಭಾಧಿಸಬಹುದು. ಗಣೇಶನಿಗೆ ಅರ್ಚನೆ ಮಾಡಿಸಿ.
ಶುಭ ಸಂಖ್ಯೆ : 5-6-9-11, ಬಣ್ಣ : ಕೆಂಪು-ಬಿಳಿ
» ಕನ್ಯಾ : ಯೋಚನೆ ಸರಿ ಇರಲಿ. ಹಳೆ ಚಾಳಿ ಮರುಕಳಿಸಬಹುದು. ಸ್ತ್ರೀಯರಿಗೆ ಧನ ವ್ಯಯ. ಆರೋಗ್ಯ ಮಧ್ಯಮ. ವಿದ್ಯಾರ್ಥಿಗಳಿಗೆ ಮಿಶ್ರ ಫಲ. ಗುರು ರಾಯರನ್ನು ಆರಾಧನೆ ಮಾಡಿ.
ಶುಭ ಸಂಖ್ಯೆ : 7-10-11-03, ಬಣ್ಣ : ಕೆಂಪು-ನೀಲಿ-ಬೂದು
» ತುಲಾ : ಯೋಚನೆ ನಿದ್ರೆಗೆಡಿಸಿದರೂ ಭಗವದನುಗ್ರಹವಿದೆ. ದೇಹಾರೋಗ್ಯಕ್ಕೆ ಒತ್ತು ನೀಡಿ. ಖರ್ಚು ಕಡಿಮೆ ಆಗುವುದು ಕಷ್ಟ. ದುರ್ಗೆಯನ್ನ ಪೂಜಿಸಿ.
ಶುಭ ಸಂಖ್ಯೆ : 8-9-4, ಬಣ್ಣ : ನೀಲಿ-ಬಿಳಿ-ಬೂದು
» ವೃಶ್ಚಿಕ : ಕೇಂದ್ರ ಶನಿ ಪಂಚಮದ ರಾಹು ತೊಂದರೆ ನೀಡುತ್ತಾರೆ. ಭಾಗ್ಯೋದಯವಿದೆ. ಈ ದಿನ ಉತ್ತಮ. ಗಣೇಶ ಪೂಜೆ ಮಾಡಿ.
ಶುಭ ಸಂಖ್ಯೆ : 8-1-5, ಬಣ್ಣ : ಕೆಂಪು-ಬಿಳಿ-ಕೇಸರಿ
» ಧನು : ನಿಮ್ಮ ಎಲ್ಲಾ ಕಷ್ಟಗಳು ಕರುಗುತ್ತಿವೆ. ಕೆಲಸ ಮಾಡಲು ಆಗುತ್ತಿಲ್ಲ. ವಿದ್ಯಾರ್ಥಿಗೆ ಉತ್ತಮ ಭವಿಷ್ಯವಿದೆ. ನಿಮ್ಮ ಇಷ್ಟದ ಸಹಸ್ರನಾಮ ಓದಿ. ನಾಮ ಜಪ ಮಾಡಿ.
ಶುಭಸಂಖ್ಯೆ : 9-12-04, ಬಣ್ಣ : ಕೇಸರಿ-ಬಿಳಿ
» ಮಕರ : ಶ್ರಾವಣ ಮಾಸ ಶುಭ ತಂದಿದೆ. ಭಾದ್ರಪದವೂ ಒಳ್ಳೆದಿದೆ. ಮನೆಯಲ್ಲೂ ಸುಧಾರಣೆ ಇಂದು ಇದೆ. ಉದ್ಯೋಗ ಸ್ಥಿರ.
ಶುಭ ಸಂಖ್ಯೆ : 10-11-02, ಬಣ್ಣ: ನೀಲಿ-ಬೂದು-ಕಪ್ಪು
» ಕುಂಭ : ಅನ್ಯ ವಿಷಯದ ಬಗ್ಗೆ ಗಮನ ಬೇಡ. ತೊಂದರೆ ಆದೀತು. ನಿಮ್ಮ ಕೆಲಸ ಆಗುವ ದಿನ ಹತ್ತಿರವಿದೆ. ನಾಗನಿಗೆ ಎಳನೀರು ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 11-03-06, ಬಣ್ಣ : ನೀಲಿ-ಬೂದು
» ಮೀನ : ಗಡಿಬಿಡಿ. ಆತುರದ ನಿರ್ಧಾರ. ಸಂಕಟಕ್ಕೆ ಸಿಲುಕಿಸುತ್ತಿದೆ. ಎಚ್ಚರ. ಎಲ್ಲರು ಸಹಾಯವಿದೆ. ಸಪ್ತಮದ ಕೇತು ಮನೆಯವರಿಂದ ಬೇಸರ. ನಿಮ್ಮ ಕೆಲಸದಲ್ಲೇ ನಿಮ್ಮ ಸುಖವಿದೆ. ಯೋಚಿಸಿ ನಡೆಯಿರಿ. ಮನೆ ದೇವರ ನೆನೆಯಿರಿ.
ಶುಭ ಸಂಖ್ಯೆ : 12-1-8-5, ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಸೆಪ್ಟೆಂಬರ್ ತಿಂಗಳು, ಕರ್ನಾಟಕದಲ್ಲಿ 9 ದಿನ ಬ್ಯಾಂಕುಗಳಿಗೆ ರಜೆ, ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200