ಶಿವಮೊಗ್ಗ ಲೈವ್.ಕಾಂ | SHIMOGA NEWS | 02 ಅಕ್ಟೋಬರ್ 2021
ಕೋವಿಡ್’ನಿಂದಾಗಿ ಸ್ಥಗಿತಗೊಂಡಿದ್ದ ಮೋಟೊ ಸ್ಪೋರ್ಟ್’ಗೆ ಅಮೋಘ ಚಾಲನೆ ಸಿಕ್ಕಿದೆ. ಶಿವಮೊಗ್ಗದಲ್ಲಿ ಡರ್ಟ್ ಟ್ರಾಕ್ ರೇಸ್ ಆರಂಭವಾಗಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ರೇಸ್ ಕಾರುಗಳ ಘರ್ಜನೆ ಜೋರಾಗಿದೆ.
ಮೈ ಜುಮ್ ಅನಿಸುವ ವೇಗ.. ಕಿವಿಗಡಚಿಕ್ಕುವ ಶಬ್ದ.. ಯುವಕರ ಉತ್ಸಾಹ ಹೆಚ್ಚಿಸುತ್ತಿದ್ದ ಡ್ರೈವರ್’ಗಳು.. ಇದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಸ್ಟೇಡಿಯಂನಲ್ಲಿ ನಡೆಯುತ್ತಿರುವ ಡ್ರರ್ಟ್ ಪ್ರಿಕ್ಸ್ ಕಾರು ರಾಲಿಯ ದೃಶ್ಯ.
ಎಎಂಎಸ್ ಸಿ ಕ್ಲಬ್ ವತಿಯಿಂದ ರಾಜ್ಯಮಟ್ಟದ ಡರ್ಟ್ ಟ್ರಾಕ್ ರೇಸ್ ಆಯೋಜಿಸಲಾಗಿದೆ. ಕ್ಲೋಸ್ ಸರ್ಕಿಟ್ ರೇಸ್’ನಲ್ಲಿ ಭಾಗವಹಿಸಲು ವಿವಿಧ ಜಿಲ್ಲೆಯ ಡ್ರೈವರ್’ಗಳು ಆಗಮಿಸಿದ್ದಾರೆ. 80ಕ್ಕೂ ಹೆಚ್ಚು ಚಾಲಕರು ವಿವಿಧ ಕೆಟಗರಿಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಮಳೆಯಾಗಿದ್ದರಿಂದ ಟ್ರಾಕ್ ಜಾರುತ್ತಿದ್ದರಿಂದ ಚಾಲಕರಿಗೆ ಅತ್ಯಂತ ಚಾಲೆಂಜಿಂಗ್ ಅನಿಸಿತು. ಆದರೆ ಗೆಲ್ಲಬೇಕು, ರೆಕಾರ್ಡ್ ಬ್ರೇಕ್ ಮಾಡಬೇಕು ಎಂಬ ಹುಮ್ಮಸ್ಸಿನೊಂದಿಗೆ ಚಾಲಕರು ಟ್ರಾಕ್’ಗೆ ಇಳಿದಿದ್ದರು.
VIDEO NEWS
ಕೋವಿಡ್ ನಂತರ ಮೋಟೊ ಸ್ಪೋರ್ಟ್’ಗೆ ಅಮೋಘ ಚಾಲನೆ ಸಿಕ್ಕಿದೆ. ಯುವಕರು ಕೂಡ ಉತ್ಸಾಹದಿಂದ ಪಾಲ್ಗೊಂಡು ಚಾಲಕರನ್ನು ಹುರಿದುಂಬಿಸುತ್ತಿದ್ದಾರೆ. ಭಾನುವಾರವು ರೇಸ್ ನಡೆಯಲಿದೆ.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್ ರೇಸ್’ಗೆ ಚಾಲನೆ ನೀಡಿದರು
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200