ಶಿವಮೊಗ್ಗ ಲೈವ್.ಕಾಂ | SHIMOGA | 17 ಅಕ್ಟೋಬರ್ 2019

ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಶಿವಮೊಗ್ಗ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸುತ್ತಿದೆ. ಎರಡು ದಿನದಲ್ಲಿ ಜಿಲ್ಲೆಯಾದ್ಯಂತ ಭಾರಿ ದಂಡ ವಿಧಿಸಲಾಗಿದೆ.
ಸಾರ್ವಜನಿಕರಲ್ಲಿ ಹೆಲ್ಮೆಟ್ ಧರಿಸುವ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವೇಳೆ ಎರಡು ದಿನದಲ್ಲಿ 507 ಪ್ರಕರಣಗಳನ್ನು ದಾಖಲು ಮಾಡಿಕೊಂಡು ಸುಮಾರು 2.53 ಲಕ್ಷ ರೂ. ದಂಡ ವಿಧಿಸಲಾಗಿದೆ
ಕಾರ್ಯಾಚರಣೆಯ ಮೊದಲ ದಿನ ಅಕ್ಟೋಬರ್ 14ರಂದು ಜಿಲ್ಲೆಯಾದ್ಯಂತ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ 286 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಈ ಪೈಕಿ 180 ಕೇಸ್’ಗಳು ಶಿವಮೊಗ್ಗ ನಗರದಲ್ಲಿ ದಾಖಲಾಗಿವೆ.
ಅಕ್ಟೋಬರ್ 15ರಂದು ಜಿಲ್ಲೆಯಾದ್ಯಂತ 221 ಪ್ರಕರಣ ದಾಖಲಾಗಿದೆ. ಎರಡು ದಿನದ ದಾಖಲಾದ ಪ್ರಕರಣಗಳ ಪೈಕಿ, ಶೇ.90ರಷ್ಟು ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾವಣೆ ಮಾಡಿದ ಪ್ರಕರಣಗಳಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೆಲ್ಮೆಟ್ ಕಡ್ಡಾಯ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ವತಿಯಿಂದ ಜಾಗೃತಿ ಜಾಥಾ ನಡೆಸಲಾಗಿತ್ತು. ಆ ಬಳಿಕ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದು ಇನ್ನಷ್ಟು ದಿನ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದರೆ.
ಲಿಂಕ್ ಕ್ಲಿಕ್ ಮಾಡಿ, ಪೂರ್ತಿ ನ್ಯೂಸ್ ಓದಿ
- ಬೆಂಗಳೂರು – ಶಿವಮೊಗ್ಗ ಎಷ್ಟು ಎಕ್ಸ್ಪ್ರೆಸ್ ರೈಲುಗಳಿವೆ? ಯಾವ್ಯಾವ ರೈಲಿನ ಟೈಮಿಂಗ್ ಏನು?
- ಶಿವಮೊಗ್ಗದ ಕಾಲೇಜಿನಲ್ಲಿ ಅಗ್ನಿ ಅವಘಡದ ಪ್ರಾತ್ಯಕ್ಷಿಕೆ
- ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ, ಶ್ರೀಗಂಧ, ಗರಗಸ ಸಹಿತ ಆರೋಪಿಗಳು ಅರೆಸ್ಟ್
- ಶಿವಮೊಗ್ಗ – ಭದ್ರಾವತಿ ರಸ್ತೆ ಪಕ್ಕದಲ್ಲಿ ಕಟ್ಟಡ ತೆರವು ವೇಳೆ ಅವಘಡ – 3 ಫಟಾಫಟ್ ಕ್ರೈಮ್ ನ್ಯೂಸ್
- 30ಕ್ಕೂ ಹೆಚ್ಚು ಅಡಿಕೆಗೆ ಸಸಿಗಳಿಗೆ ಕೊಡಲಿ ಹಾಕಿದ ದುಷ್ಕರ್ಮಿಗಳು

