ಶಿವಮೊಗ್ಗ ಲೈವ್.ಕಾಂ | HOSANAGARA | 17 ಅಕ್ಟೋಬರ್ 2019

ಮಡೋಡಿ ಸೇತುವೆ ಕುಸಿದ ಬಳಿಕ ಬೈಂದೂರು, ರಾಣೆಬೆನ್ನೂರಿಗೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆ ಸಂಪರ್ಣ ಹಾಳಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟಕರವಾಗಿದೆ.
ಸೇತುವೆ ಕುಸಿದ ಹಿನ್ನೆಲೆ, ಮತ್ತಿಕೈ – ಮಡೋಡಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಭಾರಿ ಸಂಖ್ಯೆಯ ವಾಹನ ಸಂಚಾರದಿಂದಾಗಿ ಈ ರಸ್ತೆ ಗುಂಡಿಮಯವಾಗಿದೆ.
ಹಲವು ಮಜರೆ ಹಳ್ಳಿಗಳಿಗೆ ಈ ರಸ್ತೆ ಸಂಪರ್ಕ ಸೇತುವೆಯಾಗಿತ್ತು. ಆದರೆ ಈಗ ಗುಂಡಿಮಯವಾಗಿದೆ. ಇದರಿಂದ ಈ ಗ್ರಾಮಗಳ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಗುಂಡಿ ಬಿದ್ದ ರಸ್ತೆ ವೀಕ್ಷಣೆಗೆ ಕಿಮ್ಮನೆ

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಬುಧವಾರ ರಸ್ತೆಯ ಪರಿಸ್ಥಿತಿ ವೀಕ್ಷಿಸಿದರು. ತಾವು ಶಾಸಕರಾಗಿದ್ದ ಸಂದರ್ಭ 2012 – 13ರಲ್ಲಿ ಒಂದುವರೆ ಕೋಟಿ ರೂ. ವೆಚ್ಚದಲ್ಲಿ ರಸ್ತೆಯ ಅಭಿವೃದ್ಧಿ ಮಾಡಲಾಗಿತ್ತು. ಆದರೆ ಮಡೋಡಿ ಸೇತುವೆ ಕುಸಿತದಿಂದಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಳವಾಗಿ ರಸ್ತೆ ಹಾಳಾಗಿದೆ. ಸರ್ಕಾರ ಕೂಡಲೆ ರಸ್ತೆಯ ದುರಸ್ಥಿ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ವೇಳೆ ದೊಡ್ಮೆನ ಲಕ್ಷ್ಮೀನಾರಾಯಣ, ರಾಮಚಂದ್ರ, ಕರುಣಾಕರ ಶೆಟ್ಟಿ, ಮಹಾಬಲೇಶ್ವರ ಭಟ್, ಪುಟ್ಟಪ್ಪ, ಟಿ.ಡಿ.ಗಣಪತಿ, ವೆಂಕಟರಮಣ ಭಟ್ ಸೇರಿದಂತೆ ಹಲವರು ಇದ್ದರು.
ಲಿಂಕ್ ಕ್ಲಿಕ್ ಮಾಡಿ, ಕೆಳಗಿರುವ ಸುದ್ದಿಗಳನ್ನು ಓದಿ
- ತೀರ್ಥಹಳ್ಳಿಯ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ ಇನ್ನಿಲ್ಲ
- ಶಿವಮೊಗ್ಗ – ಚಿಕ್ಕಮಗಳೂರು ವಿಧಾನ ಪರಿಷತ್ ಮಾಜಿ ಸದಸ್ಯ ನಿಧನ
- ಶಿವಮೊಗ್ಗದಲ್ಲಿ ಚುನಾವಣಾ ಕಚೇರಿ ಶುರು ಮಾಡಿದ ಆಯನೂರು ಮಂಜುನಾಥ್, ಕುತೂಹಲ ಮೂಡಿಸಿದ ನಡೆ
- ಡ್ಯೂಟಿ ಮುಗಿಸಿ ಆಸ್ಪತ್ರೆಯಿಂದ ಹೊರ ಬಂದ ಡಾಕ್ಟರ್ಗೆ ಕಾದಿತ್ತು ಶಾಕ್
- ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಕಂಟಕವಾಯ್ತು 3ನೇ ಗೇಟ್, ಎಚ್ಚೆತ್ತುಕೊಳ್ಳದಿದ್ದರೆ ಅಪಘಾತ ಫಿಕ್ಸ್
