ಶಿವಮೊಗ್ಗ ಲೈವ್.ಕಾಂ | BHADRAVATHI | 16 ಫೆಬ್ರವರಿ 2020

ಮದುವೆ ದಿಬ್ಬಣದ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೂಡಲ ವಿಠಲಾಪುರ ಗ್ರಾಮದ ಬಳಿ ಘಟನೆ ಸಂಭವಿಸಿದೆ.
ಹನುಂತಾಪುರದ ಈರಪ್ಪ (45), ಆಶಾ (34), ಹೇಮಂತ್ (7) ಮೃತ ದುರ್ದೈವಿಗಳು. ಹೊಳೆಹೊನ್ನೂರು ಆಸ್ಪತ್ರೆಗೆ ತೆರಳುವಾಗ ದುರ್ಘಟನೆ ಸಂಭಿವಿಸಿದೆ.
ಜವರಾಯನಾದ ದಿಬ್ಬಣದ ಬಸ್
ಆರೋಗ್ಯ ತಪಾಸಣೆಗಾಗಿ ಗರ್ಭಿಣಿ ಪತ್ನಿಯನ್ನು ಈರಪ್ಪ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಮೂಡಲ ವಿಠಲಾಪುರ ಗ್ರಾಮದ ಬಳಿ ಮದುವೆ ದಿಬ್ಬಣದ ಬಸ್ ಡಿಕ್ಕಿ ಹೊಡೆದಿದೆ. ಬಸ್ಸು ಶಿವಮೊಗ್ಗದಲ್ಲಿ ಮದುವೆ ಮುಗಿಸಿಕೊಂಡು ಗುಡುಮಘಟ್ಟಕ್ಕೆ ತೆರಳುತ್ತಿತ್ತು.
ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೊಳೆಹೊನ್ನುರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]